ಬೆಂಗಳೂರು : ವಲಸೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ವಲಸೆ ಕಾರ್ಮಿಕರಿಗಾಗಿ 7 ಕಡೆ ಟ್ರಾನ್ಸಿಟ್ ಮನೆಗಳ ನಿರ್ಮಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
BIGG NEWS: ಕೇಂದ್ರ ಸಚಿವರು, ಆರ್ಥಿಕತೆ, ವಾಣಿಜ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ
ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ವಲಸೆ ಕಾರ್ಮಿಕರಿಗಾಗಿ ಬೆಂಗಳೂರು, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ ಸೇರಿದಂತೆ 7 ಕೆ ಟ್ರಾನ್ಸಿಟ್ ಮನೆ ನಿರ್ಮಿಸಲಾಗುತ್ತಿದೆ. ಈ ಮೂಲಕ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ವಲಸೆ ಕಾರ್ಮಿಕರಿಗಾಗಿಯೇ ಸಹಾಯವಾಣಿ ಆರಂಭಿಸಿದ್ದು, ಕರೆ ಮಾಡಿದವರಿಗೆ ಅಗತ್ಯ ಸವಲತ್ತು ಒದಗಿಸಲಾಗುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿರುವ ಶೈಕ್ಷಣಿಕ ಸಹಾಯಧನ ಮೊತ್ತ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
BIGG NEWS : ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಸಿಹಿಸುದ್ದಿ : ಬೆಳೆ ಪರಿಹಾರಕ್ಕಾಗಿ 300 ಕೋಟಿ ರೂ. ಬಿಡುಗಡೆ