ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಸದ್ಯಕ್ಕೆ ಹೋಟೆಲ್ ಊಟ, ತಿಂಡಿ ದರಗಳ ಏರಿಕೆಗೆ ರಾಜ್ಯ ಹೋಟೆಲ್ ಗಳ ಸಂಘ ಬ್ರೆಕ್ ಹಾಕಿದೆ.
ಅಡುಗೆ ಎಣ್ಣೆ, ವಾಣಿಜ್ಯ ಬಳಕೆಯ ಸಿಲಿಂಡರ್ ಹಾಗೂ ಕಾರ್ಮಿಕ ವೇತನ ಸೇರಿ ಇನ್ನಿತರ ಖರ್ಚು-ವೆಚ್ಚಗಳ ದುಬಾರಿಯಾದ ಕಾರಣದಿಂದ ಹೋಟೆಲ್ ಊಟ, ತಿಂಡಿ ದರಗಳ ಏರಿಕೆಗೆ ಮುಂದಾಗಿದ್ದವು. ಆದರೆ ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ ಎಂದು ಹೋಟೆಲ್ ಗಳ ಸಂಘ ಹೇಳಿಕೆ ನೀಡಿದೆ.
ಇನ್ನು ಕಳೆದ ಜನವರಿಯಲ್ಲಿ ಹೋಟೆಲ್ ಗಳ ಮಾಲೀಕರು ಊಟ, ತಿಂಡಿಗಳ ಮೇಲೆ 5-6 ರೂ. ಹೆಚ್ಚಿಸಿದ್ದರು. ಮಾರ್ಚ್, ಏಪ್ರಿಲ್ ನಲ್ಲಿ ಮತ್ತೊಮ್ಮೆ ದರ ಹೆಚ್ಚಳ ಮಾಡಿದ್ದರು. ಈಗ ಮತ್ತೊಮ್ಮೆ ದರ ಏರಿಸಿದರೆ ಹೋಟೆಲ್ ಗಳಿಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿ ವ್ಯಾಪಾರ ಕುಸಿಯುವ ಭೀತಿಯಿಂದ ದರ ಹೆಚ್ಚಳ ಮಾಡದಿರಲು ರಾಜ್ಯ ಹೋಟೆಲ್ ಗಳ ಸಂಘ ನಿರ್ಧರಿಸಿದೆ.