ಬೆಂಗಳೂರು: ಬಿಎಂಟಿಸಿಯ ನೌಕರರಿಗೆ ( BMTC Employees ) ಕೆನರಾ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ನೌಕರರಿಗೆ ಅಪಘಾತ ವಿಮೆ ಪರಿಹಾರ ಸೌಲಭ್ಯವನ್ನು ಜಾರಿಗೊಳಿಸಲಾಗುತ್ತಿದೆ.
BIGG NEWS : ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಇಂದು ಮೂರು ಆರೋಗ್ಯ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( Chief Minister Basavaraj Bommai ) ವಿಧಾನಸೌಧದದ ಮುಂದೆ 12 ಮೀಟರ್ ಉದ್ದದ ಹವಾನಿಯಂತ್ರಣ ರಹಿತ ಎಲೆಕ್ಟ್ರಿಕ್ ಬಸ್ ಗಳನ್ನು ಲೋಕಾರ್ಪಣೆಗೊಳಿಸಿದರು.
ಇದಷ್ಟೇ ಅಲ್ಲದೇ ಬಿಎಂಟಿಸಿಯ ರಜತ ಮಹೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು. ಜೊತೆಗೆ ನೌಕರರಿಗೆ ಕೆನರಾ ಬ್ಯಾಂಕ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಅಪಘಾತ ವಿಮೆ ಪರಿಹಾರ ಸೌಲಭ್ಯ ಯೋಜನೆಯನ್ನು ಪ್ರಕಟಿಸಿದರು.
12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಗಳ ವಿಶೇಷತೆ
12 ಮೀಟರ್ ಉದ್ದದ ಸ್ವಿಚ್ ಎಲೆಕ್ಟ್ರಿಕ್ ಬಸ್ ಗಳು ಸುಧಾರಿತ ಲಿಥಿಯಂ ಐಯಾನ್ ಎನ್ ಎಂ ಸಿ ಕೆಮಿಸ್ಟ್ರಿಯೊಂದಿಗೆ ಮಾಡ್ಯುಲರ್ ಬ್ಯಾಟರಿಗಳನ್ನು ಹೊಂದಿದ್ದು, ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ರೂಪಿಸಲಾಗಿದೆ.
ಇದು ಹೆಚ್ಚಿನ ಕಿಲೋಮೀಟರ್ ಗಳನ್ನು ಶಕ್ತಗೊಳಿಸುತ್ತದೆ. ಸಂತೋಷಕರ ಗ್ರಾಹಕ ಅನುಭವ ನೀಡಲು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಸ್ವಿಚ್ ಎಲೆಕ್ಟ್ರಿಕ್ ಬಸ್ ಗಳಲ್ಲಿ ಸಂಪರ್ಕಿತ ತಂತ್ರಜ್ಞಾನ ಪರಿಹಾರಗಳು, ಸ್ವಿಟ್ ಐಕಾನ್ ರಿಮೋಟ್, ರಿಯಲ್ ಟೈಮ್ ಡಯಾಗ್ನೋಸ್ಟಿಕ್ ಮತ್ತು ಮಾನಿಟರಿಂಗ್ ಸೇವೆಗಳಿವೆ.