ಬೆಂಗಳೂರು : ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
Karnataka Weather Report : ರಾಜ್ಯದಲ್ಲಿ ಕೊಂಚ ಬ್ರೇಕ್ ಕೊಟ್ಟ ಮಳೆರಾಯ : ನಾಳೆಯಿಂದ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ!
ಬಿಬಿಎಂಪಿಯ 24 ವಾರ್ಡ್ ಗಳ ಹೆಸರು ಬದಲಾವಣೆ, ವಾರ್ಡ್ ವೊಂದಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವುದರೊಂದಿಗೆ ಬಿಬಿಎಂಪಿಯ ವಾರ್ಡ್ ವಾರು ಕ್ಷೇತ್ರ ಮರು ವಿಂಗಡಣೆಯ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದೆ. 243 ವಾರ್ಡ್ ಗಳ ಮರು ವಿಂಗಡಣೆ ವರದಿಗೆ ಸಲ್ಲಿಕೆಯಾದ 3,833 ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪತ್ರದ ಮೂಲಕ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
Big news: ಸ್ವಂತ ಇಂಟರ್ನೆಟ್ ಸೇವೆ ಹೊಂದಿರುವ ದೇಶದ ಮೊದಲ & ಏಕೈಕ ರಾಜ್ಯ ʻಕೇರಳʼ: ಸಿಎಂ ಪಿಣರಾಯಿ ವಿಜಯನ್
29 ಜನವರಿ 2021ರಲ್ಲಿ ರಾಜ್ಯ ಸರ್ಕಾರವು ಡಿ ಲಿಮಿಟೇಷನ್ ಕಮಿಟಿ ರಚಿಸಿತ್ತು ಈ ಸಮಿತಿಯಿಂದ 09 ಜೂನ್ 2022 ರಂದು ಸರ್ಕಾರಕ್ಕೆ ವಾರ್ಡ್ ಮರುವಿಂಗಡಣಾ ಪಟ್ಟಿ ಸಲ್ಲಿಕೆ ಮಾಡಿತ್ತು. ಬಳಿಕ ಸಾರ್ವಜನಿಕರ ಸಲಹೆ ಸೂಚನೆ ಮೇರೆಗೆ 15 ದಿನಗಳ ಕಾಲವಕಾಶ ನೀಡಿದ್ದ ಸರ್ಕಾರ ಇದೀಗ ಅಂತಿಮವಾಗಿ ಬೆಂಗಳೂರು ವಾರ್ಡ್ ಗಳ ಸಂಖ್ಯೆ 243ಕ್ಕೆ ಏರಿಕೆ ಮಾಡಿದೆ ಆದೇಶ ಹೊರಡಿಸಿದೆ.
ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆ ಮಾಡಿ, ವಾರ್ಡ್ ನಂಬರ್ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ. ಡಿ ಲಿಮಿಟೇಷನ್ ಅಂತಿಮಗೊಳಿಸಿ ಹೊರಡಿಸಿದ ರಾಜ್ಯ ಪತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಾರ್ಡ್ ಸಂಖ್ಯೆ 55 ಈ ಮೊದಲು ಕಾವೇರಿ ನಗರ ಆಗಿತ್ತು. ಇದೀಗ ಕಾವೇರಿ ನಗರದ ಹೆಸರು ಬದಲಿಸಿ ಪುನೀತ್ ರಾಜ್ ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ.