ಕೊಪ್ಪಳ : ಬಿಜೆಪಿ ಪಕ್ಷದಿಂದ ಮುನಿಸಿಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಶೀಘ್ರವೇ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಡಿಸೆಂಬರ್ 25 ರಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜನಾರ್ದನರೆಡ್ಡಿ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ವಿಫಲವಾಗಿದೆ ಎನ್ನಲಾಗಿದ್ದು, ಸಚಿವ ಶ್ರೀರಾಮುಲು ಅವರನ್ನು ಗೆಳೆಯ ಜನಾರ್ದನ ರೆಡ್ಡಿ ಮನವೊಲಿಸಿ ಪಕ್ಷಕ್ಕೆ ಕರೆತರುವಂತೆ ರಾಜ್ಯ ಬಿಜೆಪಿ ನಾಯಕರ ಪ್ರಯತ್ನವೂ ವಿಫಲವಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ಸ್ವಂತ ಪಕ್ಷ ಕಟ್ಟಿ ಚುನಾವಣೆ ಎದುರಿಸಲು ಜನಾರ್ದನ ರೆಡ್ಡಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
BIGG NEWS : ಇಂದಿನಿಂದ ರಾಜ್ಯದ ಹೈಕೋರ್ಟ್ ಗಳಿಗೆ ಚಳಿಗಾಲದ ರಜೆ ಘೋಷಣೆ
ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ಹೊಸ ಪಕ್ಷ ನೋಂದಣಿ ಕಾರ್ಯದಲ್ಲಿ ತೊಡಗಿದ್ದರಂತೆ. ತಮ್ಮ ನೂತನ ಪಾರ್ಟಿಗೆ ಕಲ್ಯಾಣ ಕರ್ನಾಟಕ ಪಕ್ಷ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಂಗಾವತಿಯಿಂದ ತಾವೇ ಸ್ಪರ್ಧೆ ಮಾಡಿ, ಉತ್ತರ ಕರ್ನಾಟಕದ ಮೂವತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಲು ಜನಾರ್ದನರೆಡ್ಡಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಪಾರಿಜಾತ ಅಪಾರ್ಟ್ ಮೆಂಟ್ ನಲ್ಲಿ ಡಿಸೆಂಬರ್ 25 ರಂದು ಸುದ್ದಿಗೋಷ್ಠಿ ಕರೆದಿರುವ ಅವರು, ಇದಕ್ಕೂ ಮುನ್ನ ಇಂದು ತುಮಕೂರು ಸಿದ್ದಗಂಗಾ ಮಠ, ಹುಬ್ಬಳ್ಳಿಯ ಸಿದ್ಧಾರೂಡ ಮಠ, ನಾಳೆ ಗದಗಿನ ತೋಂಟದಾರ್ಯ ಶ್ರೀಗಳು, ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ನಂತರ ಮುಖಂಡರ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.