ಹಾವೇರಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯಡಿ ನೊಂದಾಯಿಸಿಕೊಂಡ ರೈತರು 12 ನೇ ಕಂತಿನ ಹಣವನ್ನು ಪಡೆಯಲು ಈ-ಕೆವೈಸಿ ಮಾಡಿಕೊಳ್ಳಲು ಹಾವೇರಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಹೆಚ್ ಅವರು ರೈತರ ಭಾಂದವರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.
ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ ಕೇಂದ್ರ ಸರ್ಕಾರದಿಂದ ರೂ.6000/- ಮತ್ತು ರಾಜ್ಯ ಸರ್ಕಾರದಿಂದ ರೂ.4000/-ಗಳಂತೆ ಒಟ್ಟು ವಾರ್ಷಿಕ ರೂ.10,000/- ರೂಗಳನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ತಾಲ್ಲೂಕಿನ ಒಟ್ಟು 32,220 ಫಲಾನುಭವಿಗಳಲ್ಲಿ ಈ ವರೆಗೆ ಕೇವಲ 21,885 ಫಲಾನುಭವಿಗಳು ಮಾತ್ರ ಇ-ಕೆವೈಸಿ ಮಾಡಿಸಿಕೊಂಡಿರುತ್ತಾರೆ. ಬಾಕಿ ಉಳಿದ 10,334 ಫಲಾನುಭವಿ ರೈತರುಗಳು ಈ ಕೂಡಲೇ ತಮ್ಮ ಹತ್ತಿರದ ಗ್ರಾಮ್-ಒನ್, ನಾಗರೀಕ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು ಹಾಗೂ ಪೋಸ್ಟ ಆಫೀಸ್ನಲ್ಲಿ ಪಿಎಂ.ಕಿಸಾನ್ ಈ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ. ಒಂದಕ್ಕಿಂತ ಹೆಚ್ಚು ಆದಾರ ಕಾರ್ಡಗಳಿಗೆ ಒಂದೇ ಮೊಬೈಲ್ ನಂಬರ ನೀಡಿದ್ದ ರೈತರುಗಳು ತಮ್ಮ ಬಯೊಮೆಟ್ರಿಕ್ ಥಂಬ್ ಇಂಪ್ರೆಷ್ನ್ ಮೂಲಕ ಈ ಕೆವೈಸಿ ಮಾಡಿಕೊಳ್ಳಬಹುದಾಗಿದೆ.
ಇ-ಕೆವೈಸಿ ಮಾಡಿಸಿಕೊಳ್ಳದ ರೈತರಿಗೆ 12 ನೇ ಕಂತಿನ ಹಣ ಜಮೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೆಂದ್ರದ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.