ಮಂಗಳೂರು: ಇಲ್ಲಿನ ಹೊರವಲಯದ ಸುರತ್ಕಲ್ ಬಳಿಯ ಕಾಟಿಪಳ್ಳದ ಬಳಿಯಲ್ಲಿ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
BIGG NEWS : ರಾಜ್ಯ ಸರ್ಕಾರದಿಂದ ನಾಳೆ `ಕೊರೊನಾ ಕಂಟ್ರೋಲ್’ ಸಭೆ : ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಮಂಗಳೂರಿನ ಹೊರವಲಯದಲ್ಲಿರುವಂತ ಕಾಟಿಪಳ್ಳದ 4ನೇ ಬ್ಲಾಕ್ ನಲ್ಲಿ ದುಷ್ಕರ್ಮಿಗಳ ತಂಡವೊಂದು ಫ್ಯಾನ್ಸಿ ಸ್ಟೋರ್ ಮಾಲೀಕ ಅಬ್ದುಲ್ ಜಲೀಲ್ (45) ಎಂಬಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ಜಲೀನ್ ನನ್ನು ಸಮೀಪಿದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಲೀಲ್ ಮೃತಪಟ್ಟಿದ್ದಾನೆ.
ಜಲೀಲ್ ಎಂಬಾತನಿಗೆ ಚಾಕುವಿನಿಂದ ಇರಿದ ವಿಷಯ ತಿಳಿದು, ಸುರಕ್ತಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
Good News : ರಾಜ್ಯ ಸರ್ಕಾರದಿಂದ `ಖಾಸಗಿ ನೌಕರ’ರಿಗೆ ಗುಡ್ ನ್ಯೂಸ್ : `ಯಶಸ್ವಿನಿ ಯೋಜನೆ’ಯಡಿ ನೋಂದಣಿಗೆ ಅವಕಾಶ