ಕೆಎನ್ಎನ್ಡಿಜಿಟಲ್ ಡೆಸ್ಕ್ : ದಸರಾದಲ್ಲಿ ಭಾಗವಹಿಸುವ ಗಜಪಡೆ ಆಗಸ್ಟ್ 7ರಂದು ಕಾಡು ಶಿಬಿರಗಳಿಂದ ನಗರಕ್ಕೆ ಮೆರವಣಿಗೆ ಮೂಲಕ ಆಗಮಿಸಲಿವೆ.
ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ನಾಗಾಪುರ ಗ್ರಾಮದ ವೀರನಹೊಸಹಳ್ಳಿಯಲ್ಲಿ ಬೆಳಿಗ್ಗೆ 9.01 ರಿಂದ 9.35 ರವರೆಗೆ ಶುಭ ಕನ್ಯಾ ಲಗ್ನದಲ್ಲಿ ಗಜಪಯಣ ಆರಂಭವಾಗಲಿದೆ.
ಕೋವಿಡ್ -19 ಬಿಕ್ಕಟ್ಟಿನಿಂದಾಗಿ ಕಳೆದ ಎರಡು ವರ್ಷಗಳಿಂದ ದಸರಾ ಆಚರಣೆಗಳು ಸರಳವಾಗಿದ್ವು. ಆದ್ರೆ, ಈ ಬಾರಿ, ಸರ್ಕಾರವು ಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಿದೆ. ದಸರಾ 2022 ಸೆಪ್ಟೆಂಬರ್ 26 ರಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 5ರಂದು ವಿಜಯದಶಮಿ ದಿನದಂದು ಜಂಬೂ ಸವಾರಿ ನಡೆಯಲಿದೆ. ಆನೆಗಳಿಗೆ ನಗರದಲ್ಲಿ ಎರಡು ತಿಂಗಳ ಕಾಲ ಕಠಿಣ ತರಬೇತಿ ನೀಡಲಾಗುವುದು.