ನವದಹಲಿ : ಕಳೆದ ಕೆಲವು ವರ್ಷಗಳಿಂದ ದೇಶೀಯ ಎಲ್ಪಿಜಿ ಬೆಲೆ ಏರಿಕೆ ಸಾಮಾನ್ಯ ಜನರ ಜೇಬಿಗೆ ಹೊರೆಯಾಗಿದೆ. ಕುತೂಹಲಕಾರಿ ಅಂಶವೆಂದರೆ ಕಳೆದ ಐದು ವರ್ಷಗಳಲ್ಲಿ 58 ಬಾರಿ LPG ದರಗಳನ್ನ ಬದಲಾಯಿಸಲಾಗಿದೆ. ಈ ಬದಲಾವಣೆಯ ನಂತ್ರ ಕಳೆದ 5 ವರ್ಷಗಳಲ್ಲಿ ಎಲ್ಪಿಜಿ ಬೆಲೆಯನ್ನು 330 ರೂಪಾಯಿಗಳಷ್ಟು ಬಲವಾಗಿ ಹೆಚ್ಚಿಸಲಾಗಿದೆ.
ಪೆಟ್ರೋಲಿಯಂ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, ಏಪ್ರಿಲ್ 1, 2017 ಮತ್ತು ಜುಲೈ 6, 2022ರ ನಡುವೆ, 58 (ಮೇಲ್ಮುಖ) ಪರಿಷ್ಕರಣೆಗಳ ನಂತ್ರ LPG ಬೆಲೆಗಳು ಶೇಕಡಾ 45ಕ್ಕಿಂತ ಹೆಚ್ಚು ಹೆಚ್ಚಾಗಿದೆ.
ಎಪ್ರಿಲ್ 2017ರಿಂದ ಜುಲೈ 2022 ರವರೆಗೆ ಎಲ್ಪಿಜಿ ಬೆಲೆಯಲ್ಲಿ ಎಷ್ಟು ಹೆಚ್ಚಳವಾಗಿದೆ, ಏಪ್ರಿಲ್ 2017ರಲ್ಲಿ ಎಲ್ಪಿಜಿ ಸಿಲಿಂಡರ್ನ ಬೆಲೆ 723 ರೂ.ಗಳಾಗಿದ್ದು, ಜುಲೈ 2022 ರ ವೇಳೆಗೆ ಅದು ಶೇಕಡಾ 45 ರಿಂದ 1053ಕ್ಕೆ ಏರಿತು.
ಎಲ್ಪಿಜಿ ಬೆಲೆಯು 2021ರಿಂದ ಇಲ್ಲಿಯವರೆಗೆ ಶೇಕಡಾ 26 ರಷ್ಟು ಹೆಚ್ಚಾಗಿದೆ. ಆದ್ರೆ, ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿನ ಈ ಹೆಚ್ಚಳವು ಜುಲೈ 1, 2021ರಿಂದ ಜುಲೈ 6, 2022ರ ನಡುವಿನ 12 ತಿಂಗಳ ಅವಧಿಯಲ್ಲಿ ಶೇಕಡಾ 26ರಷ್ಟು ಹೆಚ್ಚಳವಾಗಿದೆ. ಜುಲೈ 2021ರಲ್ಲಿ, ಅದೇ ಎಲ್ಪಿಜಿ ಸಿಲಿಂಡರ್ನ ಬೆಲೆ 834 ರೂ. ಜುಲೈ 2022ರ ಹೊತ್ತಿಗೆ, ಅದರ ಬೆಲೆ 26 ಪ್ರತಿಶತದಷ್ಟು ಹೆಚ್ಚಿ 1,053 ರೂಪಾಯಿ ಆಗಿದೆ.
ಪ್ರತಿ ರಾಜ್ಯದಲ್ಲಿನ LPG ಬೆಲೆ ವಿಭಿನ್ನ.!
LPG ಸಿಲಿಂಡರ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಯಾಕಂದ್ರೆ, ಅವುಗಳು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಮತ್ತು ಸಾರಿಗೆ ಶುಲ್ಕಗಳನ್ನ ಅವಲಂಬಿಸಿರುತ್ತದೆ. ಕಚ್ಚಾ ತೈಲ ಬೆಲೆಗಳ ಆಧಾರದ ಮೇಲೆ ಅವುಗಳನ್ನ ಲೆಕ್ಕಹಾಕಲಾಗುತ್ತದೆ.
ಸಾಮಾನ್ಯ ಜನರ ಮೇಲೆ ಹೆಚ್ಚಿದ ಹೊರೆ.!
LPGಯ ಏರುತ್ತಿರುವ ಬೆಲೆಗಳು ಸಾಮಾನ್ಯ ಜನರಿಗೆ ಹೊರೆಯಾಗಿದೆ. ಆದ್ರೆ, ಏರುತ್ತಿರುವ ಹಣದುಬ್ಬರದ ಜೊತೆಗೆ ಹೆಚ್ಚುತ್ತಿರುವ ನಿರುದ್ಯೋಗವು ಆರ್ಥಿಕ ಬೆಳವಣಿಗೆಯನ್ನ ದುರ್ಬಲಗೊಳಿಸಿದೆ. LPG ಬೆಲೆಗಳು ದೀರ್ಘಕಾಲದವರೆಗೆ ನಿರಂತರವಾಗಿ ಹೆಚ್ಚುತ್ತಿವೆ. ಅದೇ ಸಮಯದಲ್ಲಿ, ವಾಣಿಜ್ಯ ಅನಿಲದ ಬೆಲೆ ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಬೆಲೆಗಳು ಕಡಿಮೆಯಾಗುತ್ತವೆ. ಇತ್ತೀಚೆಗೆ, ಸೆಪ್ಟೆಂಬರ್ 1ರಂದು, ವಾಣಿಜ್ಯ ಎಲ್ಪಿಜಿ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇತ್ತಿಚಿಗೆ ತೈಲ ಕಂಪನಿಗಳು ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನ 91.50 ರೂಪಾಯಿ ಕಡಿತಗೊಳಿಸಿವೆ.