ಕೆಎನ್ಎನ್ಡಿಜಿಟಲ್ ಡೆಸ್ಕ್ : ಆಧಾರ್ ಸಂಖ್ಯೆಯು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ 12 ಅಂಕಿಗಳ ಯಾದೃಚ್ಛಿಕ ಸಂಖ್ಯೆಯಾಗಿದ್ದು, ಇದನ್ನ ನಿಗದಿತ ಪರಿಶೀಲನಾ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ ನಂತರ ನಾಗರಿಕರಿಗೆ ನೀಡಲಾಗುತ್ತದೆ. ಯುಐಡಿಎಐ ವೆಬ್ಸೈಟ್ ಪ್ರಕಾರ, ಆಧಾರ್ ಒಂದು ಗುರುತಿನ ದಾಖಲೆಯಾಗಿ ಫಲಾನುಭವಿಗಳು ತಮ್ಮ ಗುರುತನ್ನ ಸಾಬೀತುಪಡಿಸಲು ಅನೇಕ ದಾಖಲೆಗಳನ್ನ ಸಲ್ಲಿಸುವ ಅಗತ್ಯವನ್ನ ತೆಗೆದುಹಾಕುವ ಮೂಲಕ ಅನುಕೂಲಕರ ರೀತಿಯಲ್ಲಿ ತಮ್ಮ ಹಕ್ಕುಗಳನ್ನ ಪಡೆಯಲು ಅನುವು ಮಾಡಿಕೊಡುತ್ತದೆ.
ಪಿಂಚಣಿದಾರರಿಗೆ ಅತ್ಯಂತ ಸಹಾಯಕ.!
ಪಿಂಚಣಿದಾರರಿಗೆ ಆಧಾರ್ ಸಂಖ್ಯೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪಿಎಫ್ ಮತ್ತು ಪಿಂಚಣಿ ನೇರವಾಗಿ ಪಿಂಚಣಿದಾರರ ಖಾತೆಗೆ ಹೋಗುವುದನ್ನ ಆಧಾರ್ ಕಾರ್ಡ್ ಖಚಿತಪಡಿಸಿದೆ ಎಂದು ಟ್ವೀಟ್ ಮಾಡಿದೆ. ಆಧಾರ್ ಕಾರ್ಡ್ ಸಹಾಯದಿಂದ, ಫಲಾನುಭವಿಗಳು ಬ್ಯಾಂಕ್ಗೆ ಹೋಗಿ ತಮ್ಮ ಜೀವನ ಪ್ರಮಾಣಪತ್ರವನ್ನ ಸಲ್ಲಿಸುವ ತೊಂದರೆಯಿಲ್ಲದೇ ತಮ್ಮ ಪಿಂಚಣಿಯನ್ನ ಪಡೆಯುವುದನ್ನ ಮುಂದುವರಿಸುತ್ತಾರೆ.
ಪಿಎಫ್ ಪಡೆಯಲು ಸಹ ಸಹಾಯಕ.!
ಉದ್ಯೋಗಿಯು ತನ್ನ ಭವಿಷ್ಯ ನಿಧಿ (EPF) ಖಾತೆಯನ್ನ ಆಧಾರ್ನೊಂದಿಗೆ ಲಿಂಕ್ ಮಾಡುವ ಮೂಲಕ ಕ್ಲೇಮುಗಳ ಇತ್ಯರ್ಥ ಪ್ರಕ್ರಿಯೆಯನ್ನ ತ್ವರಿತಗೊಳಿಸಬಹುದು. ನೌಕರರ ಭವಿಷ್ಯ ನಿಧಿ (EPF) ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನ ಕೈಗೊಂಡಿದೆ. ಇಪಿಎಫ್ಒ ಪೋರ್ಟಲ್ ಪ್ರಕಾರ, ನೀವು ಆನ್ಲೈನ್ನಲ್ಲಿ ಇಪಿಎಫ್ ಕ್ಲೇಮ್ ಸಲ್ಲಿಸಲು ಬಯಸಿದ್ರೆ, ನೀವು ನಿಮ್ಮ ಯುಎಎನ್ʼನ್ನ ಆಧಾರ್ ಸಂಖ್ಯೆಯೊಂದಿಗೆ ಕಡ್ಡಾಯವಾಗಿ ಲಿಂಕ್ ಮಾಡಬೇಕು.
ಸಕಾಲಿಕ ಪಾವತಿ ಆಯ್ಕೆ.!
ಪಿಂಚಣಿ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡುವುದರಿಂದ ಸರ್ಕಾರಿ ಅಧಿಕಾರಿಗಳಿಗೆ ನಿಮ್ಮ ಎಲ್ಲಾ ವಿವರಗಳನ್ನು ಪರಿಶೀಲಿಸುವುದು ಸುಲಭವಾಗುತ್ತದೆ. ನಿಮ್ಮ ಆಧಾರ್ ಅನ್ನು ನಿಮ್ಮ ಪಿಂಚಣಿ ಖಾತೆಗೆ ಆನ್ಲೈನ್ ಅಥವಾ ಆಫ್ಲೈನ್ ಎರಡರಲ್ಲೂ ಲಿಂಕ್ ಮಾಡಬಹುದು.
ಜೀವನ ಪ್ರಮಾಣಪತ್ರವನ್ನ ಪಡೆಯಲು ಸಹಾಯಕ.!
ಪ್ರತಿ ವರ್ಷ, ಪಿಂಚಣಿ ಮೊತ್ತವನ್ನ ಹೆಚ್ಚಿಸಲು ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನ ಸಲ್ಲಿಸಬೇಕಾಗುತ್ತದೆ. ಆಧಾರ್ ಆಧಾರಿತ ಜೀವನ್ ಪ್ರಮಾನ್ ಸೇವೆಯು ಈಗ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLC)ನ್ನ ಆನ್ಲೈನ್ನಲ್ಲಿ ಸಲ್ಲಿಸಲು ಸಾಧ್ಯವಾಗುತ್ತದೆ. ಇದು ಬಯೋಮೆಟ್ರಿಕ್ ಗುರುತಿನ ವೇದಿಕೆಯನ್ನ ಒದಗಿಸುವ ರಾಜ್ಯ ಅಥವಾ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಜಿಟಲ್ ಸೇವೆಯಾಗಿದೆ.