ಮಂಡ್ಯ : ಗಣಿಗಾರಿಕೆಯಿಂದ ಕೆಆರ್ಎಸ್ಗೆ ಅಪಾಯ ಆರೋಪ ಹಿನ್ನೆಲೆರ ರಾಜ್ಯ ಸರ್ಕಾರ ಜುಲೈ 25ರಿಂದ 31ರವರೆಗೆ ಟ್ರಯಲ್ ಬ್ಲಾಸ್ಟ್ ನಡೆಸಲು ನಿರ್ಧಾರ ಮಾಡಲಾಗಿದೆ.
ಬೇರೆಯವನೊಂದಿಗೆ ಲವ್ವಿಡವ್ವಿ: ವಿಜಯನಗರದಲ್ಲಿ ವಿವಾಹಿತ ವ್ಯಕ್ತಿಯಿಂದ ಮಾಜಿ ಪ್ರೇಯಸಿಯ ಶಿರಚ್ಛೇದ
ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಜಿಲ್ಲಾಡಳಿತದಿಂದ ದಿನಾಂಕ ಫೀಕ್ಸ್ ಆಗಿದ್ದು, ಜು-25 ರಿಂದ ಜು-31ರವರೆಗೆ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಸಿದ್ದತೆ ನಡೆದಿದೆ. KRS ಡ್ಯಾಂ ವ್ಯಾಪ್ತಿಯ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ಟ್ರಯಲ್ ನಡೆಯಲು ಸಿದ್ದತೆ ಮಾಡಲಾಗಿದೆ.
ಕಲ್ಲು ಗಣಿಗಾರಿಕೆಯಿಂದ KRS ಡ್ಯಾಂಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಾಕೃತಿಕ ವಿಕೋಪ ಇಲಾಖೆ. ಇಲಾಖೆಯ ವರದಿ ಆಧರಿಸಿ KRS ಸುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತದಿಂದ ಗಣಿಗಾರಿಕೆ ನಿರ್ಬಂಧ. ವೈಜ್ಞಾನಿಕ ವರದಿ ಇಲ್ಲದೆ ಗಣಿಗಾರಿಕೆ ನಿರ್ಬಂಧಿಸಿದ್ದಕ್ಕೆ ಗಣಿ ಮಾಲೀಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ವೈಜ್ಞಾನಿಕ ವರದಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಜಿಲ್ಲಾಡಳಿತ. ಜಿಲ್ಲಾಡಳಿತದ ಮನವಿ ಮೇರೆಗೆ ಪುಣೆಯ ವಿಜ್ಞಾನಿಗಳ ತಂಡದಿಂದ ಟ್ರಯಲ್ ಬ್ಲಾಸ್ಟ್ ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
BIGG NEWS : ಬೆಂಗಳೂರಿನಲ್ಲಿ ʼಎರಡು ಅಂತಸ್ತಿನ ಕಟ್ಟಡ ‘ ಕುಸಿತ : ಕಾರು ಜಖಂ, ಸಾವು ನೋವು ಸಂಭವಿಸಿಲ್ಲ