ಬೆಂಗಳೂರು : ಭಾರತದಲ್ಲಿ ಮತ್ತೆ ಕೊರೊನಾ ಸೋಂಕಿನ ಆತಂಕ ಎದುರಾಗಿದ್ದು, ಕೊರೊನಾ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ನಾಲ್ಕನೇ ಅಲೆ ಪರಿಣಾಮಕಾರಿಯಾಗಿರುವುದಿಲ್ಲ. ಕೊರೊನಾ ಬರುತ್ತದೆ, ಬಂದು ಹೋಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
BIGG NEWS : ವಿಧಾನಪರಿಷತ್ ನಲ್ಲೂ `SC-ST’ ಮೀಸಲು ಹೆಚ್ಚಳ ವಿಧೇಯಕ ಪಾಸ್
ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಸ್ವಾಮಿಗಳು, ಒಲೆ ಹತ್ತಿ ಉರಿದ್ರೆ ಅಡುಗೆ ಆಗುತ್ತೆ, ಭೂಮಿ ಹತ್ತಿ ಉರಿದರೆ ಏನಾಗುತ್ತೆ?, ಅಂಥ ಪ್ರಸಂಗ ಮುಂದೆ ನಡೆಯುತ್ತೆ, ಮುಂದೆ ಅದರ ಬಗ್ಗೆ ಭವಿಷ್ಯ ನುಡಿಯುತ್ತೇನೆ. ಕೊರೊನಾ ನಾಲ್ಕನೆ ಅಲೆ ಹೆಚ್ಚು ಬಾಧಿಸೋದಿಲ್ಲ, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಕೊರೊನಾ ಬರುತ್ತೆ ಹೋಗುತ್ತೆ, ಸಾವು ನೋವು ಸಂಭವಿಸಲ್ಲ, ಅಪಾಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
BREAKING NEWS : ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ : ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು