ಕಾರವಾರ: ಅಪ್ರಾಪ್ತ ಮಗನಿಗೆ ವಾಹನ ಕೊಟ್ಟ ತಾಯಿಗೆ 25,500 ರೂ ದಂಡವನ್ನು ಕಾರವಾರದ ಹಿರಿಯ ಸಿವಿಲ್ ನ್ಯಾಯಾಲಯ ವಿಧಿಸಿದೆ. ನಗರದ ನಂದನಗದ್ದಾದ ರೇಷ್ಮಾ ಅಲಿ ಶೇಖ್ ಅವರು ದಂಡಕ್ಕೆ ಒಳಗಾಗಿರುವ ಅಪ್ರಾಪ್ತ ಮಗನ ತಾಯಿಯಾಗಿದ್ದಾರೆ. ರೇಷ್ಮಾ ಅಲಿ ಶೇಖ್ ತಮ್ಮ 16 ವರ್ಷದ ಬಾಲಕನಿಗೆ ಚಲಾಯಿಸಲು ಕೊಟ್ಟಿದ್ದರು. ಬಾಲಕನು ಬುಧವಾರ ನಗರದಲ್ಲಿ ಸ್ಕೂಟಿ ಚಲಾಯಿಸುವಾಗ ಸಂಚಾರ ಪೊಲೀಸರು ತಡೆದು ಪ್ರಕರಣ ದಾಖಲಿಸಲಾಗಿತ್ತು, ಅಂಥ ಮಾಧ್ಯಮಗಳಿಗೆ ಸಂಚಾರ ಠಾಣೆ ಪಿಎಸ್ಐ ನಾಗಪ್ಪ ಬೋವಿ ತಿಳಿಸಿದ್ದಾರೆ
ಇದೇ ವೇಳೆ ಅವರು ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ಕೊಟ್ಟರೆ ವಾಹನ ಮಾಲೀಕರಿಗೆ 25 ಸಾವಿರ ರೂ. ವರೆಗೆ ದಂಡ ವಿಧಿಸಲು ಅವಕಾಶ, ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡುವ ಪಾಲಕರಿಗೆ ದಂಶ ವಿಧೀಸುವ ಅವಕಾಶವಿದೆ ಅಂತ ಅವರು ಹೇಳಿದರು.