ಕೆಎನ್ಎನ್ಡಿಜಿಟಲ್ ಡೆಸ್ಕ್ : ತಾಯಿ, ತಂಗಿ ಮತ್ತು ತಮ್ಮನನ್ನ ಅತ್ಯಂತ ಬರ್ಬರವಾಗಿ ಹತ್ಯೆಗೈದ ಆರೋಪಿ ಕರೀಮುಲ್ಲಾಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ತೆಲುಗು ರಾಜ್ಯಗಳಲ್ಲಿ ತಲ್ಲಣ ಸೃಷ್ಟಿಸಿದ್ದ ಸೈಕೋ ಕರೀಮುಲ್ಲಾಗೆ ಪ್ರದ್ದುತೂರು ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಸಂಚಲನದ ತೀರ್ಪು ನೀಡಿದೆ. 2021ರಲ್ಲಿ ಕರೀಮುಲ್ಲಾ ತನ್ನ ತಾಯಿ ಗುಲ್ಜಾರ್ ಬೇಗಂ, ಸಹೋದರಿ ಕರಿಮುನ್ನೀಸಾ ಮತ್ತು ಸಹೋದರ ಮೊಹಮ್ಮದ್ ರಫಿಯನ್ನ ಬರ್ಬರವಾಗಿ ಕೊಂದಿದ್ದ.
ಕರಿಮುನ್ನೀಸಾ ಕುಟುಂಬ ಪ್ರದ್ದತ್ತೂರು ಒನ್ ಟೌನ್ ಪೊಲೀಸ್ ಠಾಣೆ ಎದುರಿನ ಹೈದರ್ ಖಾನ್ ಸ್ಟ್ರೀಟ್’ನಲ್ಲಿ ವಾಸಿಸುತ್ತಿತ್ತು. ಕೊಲೆಯಾದಾಗ ಆತನ ಸಹೋದರಿ ಹಂತಕನ ತಂಗಿ ಆರು ತಿಂಗಳ ಗರ್ಭಿಣಿಯಾಗಿದ್ದಳು. ಆದ್ರೆ, ಸೈಕೋ ಆಗಿರುವ ಕರಿಮ್ಮುಲ್ಲಾಗೆ ಆಕೆಯನ್ನು ಬಿಟ್ಟಿರಲಿಲ್ಲ.
ಪ್ರದ್ದಟೂರು ಒನ್ ಟೌನ್ ಪೊಲೀಸ್ ಠಾಣೆ ಎದುರಿನ ಹೈದರ್ ಖಾನ್ ಸ್ಟ್ರೀಟ್’ನಲ್ಲಿ ಗುಲ್ಜಾರಬೇಗಂ (51), ಕರಿಮುನ್ನೀಸಾ (27) ಮತ್ತು ಮೊಹಮ್ಮದ್ ರಫಿ (23) ಬರ್ಬರವಾಗಿ ಕೊಲೆಯಾದವರು.