ಬೆಂಗಳೂರು : ಕಾಂಗ್ರೆಸ್ ನಿಂದ ಪೇ ಸಿಎಂ ಅಭಿಯಾನದ ಬೆನ್ನಲ್ಲೇ `ಸೇ ಸಿಎಂ’ ಅಭಿಯಾನ ಆರಂಭಿಸಲು ಮುಂದಾಗಿದ್ದು, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸದ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸೇ ಸಿಎಂ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಈವರೆಗೆ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ?ಹಲವು ಬಾರಿ ಪ್ರಶ್ನೆ ಮಾಡಿದರೂ ಸರ್ಕಾರ ಉತ್ತರಿಸಿಲ್ಲ. ಹೀಗಾಗಿ ಸೇ ಸಿಎಂ ಅಭಿಯಾನ ಆರಂಭಿಸಲಾಗುವುದು. ಸಿಎಂ ಮೂಕ ಬಸವನ ರೀತಿ ಕುಳಿತರೆ ಆಗಲ್ಲ. ಸಾರ್ವಜನಿಕರಿಗೆ ಉತ್ತರ ಕೊಡಬೇಕು ಎಂದರು.
BSF, CRPF & ಪೊಲೀಸ್ ಪಡೆ ಸೇರಲು ಬುಡಕಟ್ಟು ಸಮುದಾಯದ ಯುವಕರಿಗೆ ತರಬೇತಿಗಾಗಿ ‘ಸಿಂಧೂರ ಲಕ್ಷಣ ಕೇಂದ್ರ’ ಸ್ಥಾಪಿಸುತ್ತೇವೆ ಎಂದು ಹೇಳಿದ್ದು ನೆನೆಪಿದಿಯೇ? ಅವರೇ ಬುಡುಕಟ್ಟು ಸಮುದಾಯದ ಯುವಕರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ನೀವು ಆಡಳಿತದಲ್ಲಿ ಮುಂದುವರೆಯಲು ಅರ್ಹರೇ? ಎಂದು ಪ್ರಶ್ನಿಸಿದ್ದಾರೆ.