ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರುರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Video: ವೀಲ್ಚೇರ್ ಮೂಲಕ ಆಹಾರ ತಲುಪಿಸುತ್ತಿರುವ ವಿಶೇಷಚೇತನ: ನೆಟ್ಟಿಗರ ಹೃದಯ ಗೆದ್ದ Zomato ಡೆಲಿವರಿ ಬಾಯ್
ನಗರದಲ್ಲಿ ಮಧ್ಯರಾತ್ರಿ ತುರ್ತು ಸಭೆಯಲ್ಲಿ ಮಾತಾಡಿ ಅವರು, ಇದು ಅತ್ಯಂತ ಅಮಾಯಕ ಯುವಕನ ಕೊಲೆ ಆಗಿದೆ, ಈ ಘಟನೆ ನೋಡಿ ಮನಸ್ಸಿಗೆ ತುಂಬಾ ನೋವು ಉಂಟಾಗಿದೆ. ಇದರಿಂದ ನನ್ನ ಮನಸ್ಸಿಗೆ ಶಾಂತಿ ಅನ್ನೋದೆ ಇರಲಿಲ್ಲ. ಅವರ ಕುಟುಂಬಸ್ಥರ ನೋವು ನೋಡಿ ನನಗೆ ಬಹಳ ಸಂಕಷ್ಟವಾಯಿತು.ಈ ಸಂದರ್ಭದಲ್ಲಿ ಯಾವುದೇ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲ ಎಂಬ ಕಾರಣಕ್ಕಾಗಿ ಜನೋತ್ಸವ ರದ್ದು ಗೊಳಿಸಲಾಗಿದೆ.
CWG 2022: ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಇಂದು ವರ್ಣರಂಜಿತ ಚಾಲನೆ: ಪದಕ ಗೆಲ್ಲುವ ಉತ್ಸಾಹದಲ್ಲಿ ಇಂಡಿಯಾ
ಮಂಗಳವಾರ ರಾತ್ರಿ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ತಾಯಿ ಮತ್ತು ಪತ್ನಿ ದುಃಖಸಾಗರದಲ್ಲಿ ಮುಳುಗಿರುವಾಗ ಮತ್ತು ಶಿವಮೊಗ್ಗದ ಹರ್ಷನ ತಾಯಿಯ ಇನ್ನೂ ವೇದನೆ ಅನುಭವಿಸುತ್ತಿರುವಾಗ ಇಂಥ ಕಾರ್ಯಕ್ರಮ ನಡೆಸುವುದು ಸರಿಯಲ್ಲ ಎಂದು ಹೇಳಿದರು.