ಬೆಂಗಳೂರು : ರಾಜ್ಯದಲ್ಲಿ ದೇಶಿ ಕ್ರೀಡೆಗಳ ಉತ್ತೇಜನ ಹಾಗೂ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ರಾಜ್ಯಾದ್ಯಂತ ಆಗಸ್ಟ್ 29 ರಿಂದ ಗ್ರಾಮ ಮಟ್ಟದಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಳನೆ ನೀಡಲಿದ್ದಾರೆ.
Good News : ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ ಡೀಸೆಲ್ ಗೆ ಸಬ್ಸಿಡಿ ನೀಡುವ `ರೈತ ಶಕ್ತಿ’ ಯೋಜನೆಗೆ ಚಾಲನೆ
ಗ್ರಾಮಪಂಚಾಯತ್ ಮಟ್ಟದಿಂದ ರಾಜ್ಯಮಟ್ಟದವರೆಗೂ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಿದೆ.
ಆಗಸ್ಟ್ 29 ರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರೀಡೆ ಆರಂಭವಾಗಲಿದ್ದು, ಸೆ.9 ರವರೆಗೆ ಪಂಚಾಯಿತಿ ಮಟ್ಟದಲ್ಲಿ ನಡೆಯಲಿದೆ. ಗ್ರಾಮ ಮಟ್ಟದಲ್ಲಿ ಗೆದ್ದವರ ನಡುವೆ ಸೆ. 15 ರಿಂದ ತಾಲೂಕು ಮಟ್ಟದಲ್ಲಿ ಕ್ರೀಡಾಕೂಟ ನಡೆಯಲಿದೆ. ತಾಲೂಕು ಮಟ್ಟದ ವಿಜೇತರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳು ಏರ್ಪಾಡಾಗಲಿವೆ. ಜಿಲ್ಲಾ ಮಟ್ಟದಲ್ಲಿ ಗೆದ್ದವರು 2022 ಅಕ್ಟೋಬರ್ 3 ನೇ ವಾರದಲ್ಲಿ ರಾಜ್ಯ ಮಟ್ಟದಲ್ಲಿ ಆಡಲಿದ್ದಾರೆ.
ಇನ್ನು ಗ್ರಾಮೀಣ ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಕುಸ್ತಿ, ಖೋ-ಖೋ ಮತ್ತು ಎತ್ತಿನ ಬಂಡಿ ಸ್ಪರ್ಧೆಯನ್ನು ಆಯೋಜಿಸಲು ಆದೇಶದಲ್ಲಿ ತಿಳಿಸಲಾಗಿದೆ.