ನವದೆಹಲಿ : ತಿದ್ದುಪಡಿ ಮಾಡಲಾದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 2019 ರ ಅಡಿಯಲ್ಲಿ 18 ಜನರನ್ನ ಭಯೋತ್ಪಾದಕರು ಎಂದು ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಘೋಷಿಸಿದೆ.
ಇವರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೈಯದ್ ಸಲಾಹುದ್ದೀನ್, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ಮತ್ತು ದರೋಡೆಕೋರ ದಾವೂದ್ ಇಬ್ರಾಹಿಂಗೆ ನಿಕಟವಾಗಿರುವ ಛೋಟಾ ಶಕೀಲ್ ಸೇರಿದ್ದಾನೆ. ಕೇಂದ್ರವು 2019ರ ಸೆಪ್ಟೆಂಬರ್ನಲ್ಲಿ ನಾಲ್ವರನ್ನ ಮತ್ತು ಜುಲೈ 2020ರಲ್ಲಿ ಒಂಬತ್ತು ವ್ಯಕ್ತಿಗಳನ್ನು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಭಯೋತ್ಪಾದಕರು ಎಂದು ಘೋಷಿಸಿತ್ತು.
ಈ ಬಗ್ಗೆ ಗೃಹ ಸಚಿವಾಲಯದ ವಕ್ತಾರರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, 1999ರಲ್ಲಿ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಣಕಾರರಾದ ಅಬ್ದುಲ್ ರವೂಫ್ ಅಸ್ಗರ್, ಇಬ್ರಾಹಿಂ ಅಥರ್ ಮತ್ತು ಯೂಸುಫ್ ಅಜರ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಕೇಂದ್ರವು 2019ರ ಸೆಪ್ಟೆಂಬರ್ನಲ್ಲಿ ನಾಲ್ವರನ್ನ ಮತ್ತು ಜುಲೈ 2020 ರಲ್ಲಿ ಒಂಬತ್ತು ಜನರನ್ನ ಭಯೋತ್ಪಾದನಾ ವಿರೋಧಿ ಕಾಯ್ದೆಯಡಿಯಲ್ಲಿ ಭಯೋತ್ಪಾದಕರೆಂದು ಗೊತ್ತುಪಡಿಸಿತ್ತು. ಹೊಸ ಸೇರ್ಪಡೆಯೊಂದಿಗೆ 31 ಜನರನ್ನ ಭಯೋತ್ಪಾದಕರೆಂದು ಗುರುತಿಸಲಾಗಿದೆ.