ಬೆಂಗಳೂರು : ಸಾರಿಗೆ ಇಲಾಖೆಯು ವಾಹನ ಮಾಲೀಕರಿಗೆ ಬಿಗ್ ಶಾಕ್ ನೀಡಿದ್ದು, ವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಹೆಚ್ಚಳ ಮಾಡಲಾಗಿದೆ.
BIGG NEWS: ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಕಾವೇರಿ ಮಾತೆಗೆ ಅಪಮಾನ: ಹಿಂದೂ ಯುವಕ ಅರೆಸ್ಟ್
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಾಗೂ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಸಾರಿಗೆ ಇಲಾಖೆಯಿಂದ ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಎಲ್ಲಾ ವಾಹನಗಳ ವಾಯು ಮಾಲಿನ್ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಎಲ್ಲಾ ವಾಹನಗಳು ವಾಯು ಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರಾಜ್ಯದೆಲ್ಲಡೆ ಖಾಸಗಿ ಸಹಭಾಗಿತ್ವದಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಸಾರಿಗೆ ಇಲಾಖೆಯು ದ್ವಿಚಕ್ರವಾಹನಗಳ ವಾಯು ಮಾಲಿನ್ಯ ತಪಾಸಣೆ ದರ ಏರಿಕೆ ಮಾಡಿದ್ದು, ದ್ವಿಚಕ್ರ ವಾಹನಗಳ ವಾಯುಮಾಲಿನ್ಯ ತಪಾಸಣೆ ದರವನ್ನು 50 ರೂ.ನಿಂದ 65 ರೂ.ಗೆ ಏರಿಸಲಾಗಿದೆ. ಕಾರ್ (ಪೆಟ್ರೋಲ್) 90 ರೂ. ನಿಂದ 115 ರೂ.ಗೆ ಏರಿಸಲಾಗಿದೆ. ಕಾರ್ (ಡೀಸೆಲ್) 115 ರೂ.ಗಳಿಂದ 160 ರೂ.ಗೆ ಏರಿಕೆ ಮಾಡಲಾಗಿದೆ.
BIGG NEWS : ರಾಜ್ಯದ ಎಲ್ಲಾ ಮದರಸಗಳ ಮೇಲೆ ರಾಷ್ಟ್ರಧ್ವಜ ಹಾರಾಟ ಕಡ್ಡಾಯ : ರಾಜ್ಯ ಸರ್ಕಾರ ಆದೇಶ