ಕೆಎನ್ಎನ್ಡಿಜಿಟಲ್ ಡೆಸ್ಕ್ : ವಾಟ್ಸಾಪ್ ಬಳಕದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಸರಿಸುಮಾರು 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳನ್ನ ಸೋರಿಕೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೈಬರ್ನ್ಯೂಸ್ ವರದಿಯ ಪ್ರಕಾರ, 487 ಮಿಲಿಯನ್ ವಾಟ್ಸಾಪ್ ಬಳಕೆದಾರರ ಫೋನ್ ಸಂಖ್ಯೆಗಳನ್ನು ಕದಿಯಲಾಗಿದ್ದು, ಪ್ರಸಿದ್ಧ ಹ್ಯಾಕಿಂಗ್ ಸಮುದಾಯ ವೇದಿಕೆಯಲ್ಲಿ ಮಾರಾಟಕ್ಕೆ ಇಡಲಾಗಿದೆ. ಈ ಖಾಸಗಿ ಮಾಹಿತಿಯನ್ನ ಒಳಗೊಂಡಿರುವ ಡೇಟಾಬೇಸ್ 2022ರ ಡೇಟಾಬೇಸ್ ಯುಎಸ್, ಯುಕೆ, ಈಜಿಪ್ಟ್, ಇಟಲಿ ಮತ್ತು ಭಾರತ ಸೇರಿದಂತೆ 84 ದೇಶಗಳ ಬಳಕೆದಾರರನ್ನ ವ್ಯಾಪಿಸಿದೆ. ಇನ್ನು ಹ್ಯಾಕರ್’ಗಳು ಕದ್ದ ಎಲ್ಲಾ ಸಂಖ್ಯೆಗಳು ಸಕ್ರಿಯ ವಾಟ್ಸಾಪ್ ಬಳಕೆದಾರರ ನಂಬರ್ಗಳಾಗಿವೆ ಎಂದು ಹೇಳಿದೆ.
ವರದಿಯ ಪ್ರಕಾರ, ಸೋರಿಕೆಯಾದ ಡೇಟಾಬೇಸ್ ಯುಎಸ್’ನ 32 ಮಿಲಿಯನ್ ಮತ್ತು ಯುಕೆಯ 11.5 ಮಿಲಿಯನ್ ಬಳಕೆದಾರರ ಫೋನ್ ಸಂಖ್ಯೆಗಳನ್ನ ಒಳಗೊಂಡಿದೆ. ಆದಾಗ್ಯೂ, ಈ ಉಲ್ಲಂಘನೆಯು ಈಜಿಪ್ಟ್’ನ ಬಳಕೆದಾರರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ತೋರುತ್ತಿದ್ದು, ಸುಮಾರು 45 ಮಿಲಿಯನ್ ಜನರು ಅಪಾಯದಲ್ಲಿದ್ದಾರೆ.
ಇಟಲಿಯ 35 ಮಿಲಿಯನ್, ರಷ್ಯಾದ ಸುಮಾರು 10 ಮಿಲಿಯನ್ ಮತ್ತು ಭಾರತದಿಂದ 6 ಮಿಲಿಯನ್ ಬಳಕೆದಾರರ ಫೋನ್ ಸಂಖ್ಯೆಗಳಿಗೆ ಹ್ಯಾಕರ್’ಗಳು ಪ್ರವೇಶವನ್ನ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರು ವೋಟರ್ ಐಡಿ ಪರಿಷ್ಕರಣೆ ಅಕ್ರಮದ ರೂವಾರಿಯೇ ಸಿಎಂ ಬೊಮ್ಮಾಯಿ – ಸಿದ್ಧರಾಮಯ್ಯ
Cow Milk Or Buffalo Milk : ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸವೇನು ಗೊತ್ತಾ?