ಬೆಂಗಳೂರು : ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿದ್ರೆ ದಂಡ ಬೀಳುತ್ತೆ ಅನ್ನೋ ಸಂಗತಿ ಗೊತ್ತಿದೆ. ಆದ್ರೆ, ಈಗ ನಿಧಾನವಾಗಿ ವಾಹನ ಚಲಾಯಿಸುವವರಿಗೂ ಕೂಡ ಈ ಭಯ ಕಾಡಲಿದೆ. ಯಾಕಂದ್ರೆ, ಇನ್ಮುಂದೆ ನಿಧಾನ ಚಾಲನೆಗೂ ದಂಡ ಬೀಳಲಿದೆ.
ಹೌದು, ದೆಹಲಿ-ಮೀರತ್ ಎಕ್ಸ್ಪ್ರೆಸ್ವೇನಲ್ಲಿ ಈ ಹೊಸ ನಿಯಮ ಜಾರಿಗೆ ತರಲಾಗಿದ್ದು, ಅಲ್ಲಿ ನಿಮ್ಮ ವಾಹನ ‘ಸ್ಲೋ ಸ್ಪೀಡ್’ನಲ್ಲಿ ಓಡಿಸಿದ್ರೆ, 500 ರೂಪಾಯಿಂದ 2,000 ರೂಪಾಯಿವರೆಗೆ ದಂಡ ತೆರಬೇಕಾಗುತ್ತೆ. ಅಂದ್ಹಾಗೆ, ಈ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ ದೇಶದ ಉನ್ನತ ದರ್ಜೆಯ ಹೆದ್ದಾರಿಗಳಲ್ಲಿ ಒಂದಾಗಿದೆ. ಆದ್ರೆ, ಈ ಹೆದ್ದಾರಿ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ.
NHAI ಪ್ರಕಾರ, “ಹೆದ್ದಾರಿಗಳು ಮತ್ತು ಬಾಹ್ಯ ಎಕ್ಸ್ಪ್ರೆಸ್ವೇಗಳಲ್ಲಿ ಹೆಚ್ಚಿನ ಅಪಘಾತಗಳು ಓವರ್ಟೇಕಿಂಗ್ನಿಂದ ಸಂಭವಿಸುತ್ತವೆ. ಇವುಗಳನ್ನ ನಿಯಂತ್ರಿಸುವುದು ಪ್ರಾಧಿಕಾರದ ಮೊದಲ ಆದ್ಯತೆಯಾಗಿದೆ. ಈ ಮಾರ್ಗಗಳಲ್ಲಿ ಅಪಘಾತಗಳಿಗೆ ಎರಡನೇ ಕಾರಣವೆಂದರೆ ಕೆಲವು ನಿರ್ಲಕ್ಷ ಚಾಲಕರು ಪ್ರಾಧಿಕಾರವು ನಿಗದಿಪಡಿಸಿದ ವೇಗದ ಮಿತಿಗಿಂತ ಕಡಿಮೆ ವೇಗದಲ್ಲಿ ಚಾಲನೆ ಮಾಡುವುದು” ಆಗಿದೆ.