ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಮಳೆಯಿಂದಾಗಿ ನುಗ್ಗೆಕಾಯಿ, ಟೊಮೇಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರದಲ್ಲಿ ಏರಿಕೆಯಾಗಿದೆ.
ಕಳೆದ ವಾರ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿದ್ದು, ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಟೊಮೇಟೊ ದರ ಕೆ.ಜಿ.ಗೆ 12 ರೂ. ಇದ್ದದ್ದು, ಇದೀಗ 20-25 ರೂ.ಗೆ ಏರಿಕೆಯಾಗಿದೆ. ಕೆ.ಜಿ ಬೀನ್ಸ್ 20-30 ರೂ. ಇದ್ದದ್ದು, 40 ರೂ.ಗೆ ಏರಿಕೆಯಾಗಿದೆ.
ಹೀರೆಕಾಯಿ, ಬದನೆಕಾಯಿ, ಸೊಪ್ಪುಗಳ ದರದಲ್ಲೂ ಹೆಚ್ಚಳವಾಗಿದೆ. ಈರುಳ್ಳಿ ದರ ಏರಿಕೆಯಾಗಿಲ್ಲ. ಸದ್ಯ 100 ರೂ.ಗೆ ನಾಲ್ಕು ಕೆ.ಜಿ ಈರುಳ್ಳಿ ದೊರಕುತ್ತಿದೆ. ಬೆಳ್ಳುಳ್ಳಿ ದರವು 40-50 ರೂ.ಗೆ ಏರಿಕೆಯಾಗುತ್ತದೆ. ಬೀನ್ಸ್, ಮೆಣಸು, ಕ್ಯಾಪ್ಸಿಕಮ್, ಬೆಂಡೆಕಾಯಿ ಸೇರಿದಂತೆ ಉಳಿದ ಎಲ್ಲಾ ತರಕಾರಿಗಳ ದರವು ಕೆಜಿಗೆ 20 ರಿಂದ 30 ರೂ. ಏರಿಕೆ ಕಂಡಿದೆ.
BIGG NEWS : ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಆರೋಪಿ ಶಾರಿಕ್ ಗೆ ಇಂದು ಶಸ್ತ್ರಚಿಕಿತ್ಸೆ