ಬೆಂಗಳೂರು : ಕರ್ನಾಟಕದ ಗುಂಡ್ಲುಪೇಟೆಯಿಂದ ಕಾಂಗ್ರೆಸ್ `ಭಾರತ ಐಕ್ಯತಾ ಯಾತ್ರೆ’ ಆರಂಭವಾಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದ್ದು, ಕರ್ನಾಟಕದಲ್ಲಿ ಗುಂಡ್ಲುಪೇಟೆಯಿಂದ ಭಾರತ ಐಕ್ಯತಾ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆಯಲ್ಲಿ ಯಾರೂ ಬೇಕಾದ್ರೂ ಪಾಲ್ಗೊಳ್ಳಬಹುದು ಎಂದರು.
BIGG NEWS : ಮುರುಘಾಮಠದ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ
ಇಂದು ಬೆಲೆ ಏರಿಕೆಯಿಂದ ದೇಶ, ರಾಜ್ಯದ ಜನರು ಕಂಗೆಟ್ಟಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ಯುವಕರಿಗೆ ಉದ್ಯೋಗ ಸಿಗದೇ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆಯಾಗಬೇಕು. ಎಲ್ಲರಿಗೂ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು. ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡಬೇಕಿದೆ ಎಂದರು.
ಕರ್ನಾಟದಲ್ಲಿ 21 ಭಾರತ ಐಕ್ಯತಾ ಯಾತ್ರೆಗೆ ರೂಟ್ ಫಿಕ್ಸ್ ಮಾಡಲಾಗಿದೆ. ಪ್ರತಿದಿನ 25 ಕಿ.ಮೀ ಪಾದಯಾತ್ರೆ ನಡೆಯುತ್ತದೆ. ಭಾರತ ಒಗ್ಗೂಡಿಸುವ ಕೆಲ ಮಾಡುತ್ತೇವೆ ಎಂದು ಹೇಳಿದ್ದಾರೆ.
3500 kms, 12 states, millions of voices, one aim – unite India, save India.
Let's walk together at #BharatJodoYatra from Sept 7th for a better tomorrow. pic.twitter.com/7vrBGfJSRi
— Karnataka Congress (@INCKarnataka) August 28, 2022