ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಜಾರಿಯಾದ ನಂತರ ಇದೇ ಮೊದಲು ರಾಜ್ಯದಲ್ಲಿ ಪ್ರಕರಣ ದಾಖಲಾಗಿದೆ. ಪ್ರೀತಿ ಮಾಡಿದ ಮೇಲೆ ಮದುವೆಯಾಗಬೇಕಾದರೆ ಮತಾಂತರ ಕುರಿತು ಯುವತಿಯನ್ನು ಬಲವಂತವಾಗಿ ಮಾಡಿದ್ದವನ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೈಯದ್ ಮೊಯಿನ್ (24) ಮತಾಂತರ ನಿಷೇಧ ಕಾಯ್ದೆಯಲ್ಲಿ ಬಂಧಿತ ಆರೋಪಿ.
ಪೊಲೀಸರಿಗೆ ಮೊದಲಿಗೆ ಇದೊಂದು ಮಿಸ್ಸಿಂಗ್ ಕೇಸ್ ಆಗಿತ್ತು, ತನಿಖೆ ವೇಳೆ ಮತಾಂತರ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ.
ಪ್ರಕರಣ ಹಿನ್ನೆಲೆ?
ಮತಾಂತರಕ್ಕೆ ಒಳಗಾದ ಯುವತಿ ಕುಟುಂಬ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಕಳೆದ 15 ವರ್ಷಗಳಿಂದ ವಾಸ ಮಾಡುತ್ತಿದ್ದರು. ಯುವತಿಯು ತಮ್ಮ ಪಕ್ಕದ ಏರಿಯಾದಲ್ಲೇ ಇದ್ದ ಯುವಕನನ್ನು ಪ್ರೀತಿಸುತ್ತಿದ್ದಳು. ಹಾಗಾಗಿ ಯುವಕ ಪ್ರೀತಿ ಮಾಡಿದ ಮೇಲೆ ಮದುವೆಯಾಗಬೇಕಾದರೆ ಮತಾಂತರವಾಗಲೇಬೇಕು ಎಂದು ಒತ್ತಡ ಹೇರಿದ್ದಾನೆ. ಯುವಕನ ಒತ್ತಡದಿಂದ ಯುವತಿ ಮತಾಂತರಗೊಂಡಿದ್ದಾಳೆ.