ನವದೆಹಲಿ : ಬೆಲೆ ಏರಿಕೆಯಿಂದ ಕೆಂಗಟ್ಟಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಇಂದಿನಿಂದ ಮದರ್ ಡೈರಿ ತನ್ನ ಹಾಲಿನ ದರವನ್ನ 2 ರೂ. ಹೆಚ್ಚಳ ಮಾಡಲಾಗಿದೆ.
BIGG NEWS: ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್ , ಮಂಗಳೂರು ಬ್ಲಾಸ್ಟ್ ಗೆ ಸಂಬಂಧ ಇದೆ: ಆರಗ ಜ್ಞಾನೇಂದ್ರ
ಇಂದಿನಿಂದ ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ.
ಈ ಕುರಿತು ಮದರ್ ಡೈರಿ ವಕ್ತಾರರು ಮಾಹಿತಿ ನೀಡಿದ್ದು, ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ಪೂರ್ಣ ಕೆನೆ ಹಾಲಿನ 500 ಎಂಎಲ್ ಪ್ಯಾಕ್ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿಲ್ಲ” ಎಂದಿದ್ದಾರೆ.
ಮದರ್ ಡೈರಿ ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಹಾಲಿನ ದರವನ್ನು ಏರಿಕೆ ಮಾಡಿದ್ದು, ಇಂದಿನಿಂದ ಈ ದರ ಜಾರಿಗೆ ಬಂದಿದೆ. ಪೂರೈಕೆ ವ್ಯತ್ಯಯ, ಉತ್ಪಾದನಾ ವೆಚ್ಚದ ಏರಿಕೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮದರ್ ಡೈರಿ ವಕ್ತಾರರು ತಿಳಿಸಿದ್ದಾರೆ.