ನವದೆಹಲಿ : ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯ ಬೋಧನೆಯನ್ನು ಇಂಗ್ಲಿಷ್ ಬದಲು ಹಿಂದಿ ಮಾಧ್ಯಮದಲ್ಲೇ ಬೋಧಿಸಬೇಕು ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷರಾಗಿರುವ ಭಾಷಾ ಸಮಿತಿ ಮಹತ್ವದ ಶಿಫಾರಸು ಮಾಡಿದೆ.
BIGG NEWS : ಹಾವೇರಿಯಲ್ಲಿ 86 `ಅಖಿಲ ಭಾರತ ಕನ್ನಡ ಸಾಹಿತ್ಯ’ ಮತ್ತೆ ಮುಂದೂಡಿಕೆ!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷರಾಗಿರುವ ಭಾಷಾ ಸಮಿತಿಯು ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬದಲು ಹಿಂದಿ ಮಾಧ್ಯಮ ಬರಬೇಕು, ಐಐಟಿ, ಐಐಎಂ, ನವೋದಯ, ಕೇಂದ್ರೀಯ ವಿವಿ ಇತ್ಯಾದಿಗಳ ಬೋಧನೆಯಲ್ಲಿ ಹಿಂದಿ ಕಡ್ಡಾಯಗೊಳಿಸಬೇಕು, ಕೇಂದ್ರೀಯ ನೇಮಕಾತಿ ವೇಳೆ ಇಂಗ್ಲಿಷ್ ಬದಲು ಹಿಂದಿಯಲ್ಲಿ ಪ್ರಶ್ನೆ ಪತ್ರಿಕೆ ಇರಬೇಕು ಎಂಬ ಶಿಫಾರಸು ಸೇರಿದಂತೆ ಒಟ್ಟು 112 ಶಿಫಾರಸುಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಮಿತಿ ಸಲ್ಲಿಸಿದೆ.
ಕೇಂದ್ರ ಸರ್ಕಾರ ನಡೆಸುವ ನೇಮಕಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಇಂಗ್ಲಿಷ್ ಪ್ರಶ್ನೆಪತ್ರಿಕೆ ಕೈಬಿಟ್ಟು, ಹಿಂದಿಯಲ್ಲೇ ಪ್ರಶ್ನೆಪತ್ರಿಕೆ ರೂಪಿಸಬೇಕು. ನೌಕರರ ನೇಮಕಾತಿ ವೇಳೆ ಹಿಂದಿ ಬಲ್ಲವರಿಗೆ ಆದ್ಯತೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
BIGG NEWS : `ಬಗರ್ ಹುಕುಂ’ ಜಮೀನುಗಳಲ್ಲಿ ಸಾಗುವಳಿ ಮಾಡುವ ರೈತರಿಗೆ ಗುಡ್ ನ್ಯೂಸ್