ಬೆಂಗಳೂರು : ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ ಜಾಗ ಸರ್ಕಾರದ್ದು ಎಂದು ನಿರ್ಧರಿಸಲಾಗಿದ್ದು, ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಈದ್ಗಾ ಮೈದಾನ ಜಾಗ ಜಮೀರ್ ಅಹ್ಮದ್ ಸೇರಿ ಕೆಲ ಮುಸ್ಲಿಂ ನಾಯಕರು ಇದು ನಮ್ಮದು ಎಂದು ಹೇಳುತ್ತಿದ್ದವರ ಬಾಯಿ ಬಂದ್ ಆಗಿದೆ. ಸರ್ಕಾರದಿಂದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನು ನಾನು ಸ್ವಾಗತಿಸುತ್ತೇನೆ. ಅಲ್ಲಿ ಜಮೀರ್ ಅಹ್ಮದ್ಗೆ ಮಾತ್ರ ಅವಕಾಶ ಎಂದಲ್ಲ, ಅಲ್ಲಿ ಸಾರ್ವಜನಿಕರೂ ಆಗಮಿಸಬೇಕು. ಆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೂ ಅವಕಾಶ ಮಾಡಿಕೊಡಬೇಕು ಎಂದರು.
ಇನ್ನು ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಬೇಡಿ. ಗಲಭೆ ಆಗದಂತೆ ಮುಂಜಾಗೃತಾ ಕ್ರಮ ವಹಿಸುತ್ತೇವೆ. ಗಣೇಶನ ಕೂರಿಸಲು ಅನುಮತಿ ಪಡೆಯುವ ಪ್ರಕ್ರಿಯೆ ಸರಿ ಅಲ್ಲ. ನಿಮ್ಮನ್ನು ಕೇಳಿಕೊಂಡು ಗಣೇಶೋತ್ಸವ ಮಾಡುವುದಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.