ನವದೆಹಲಿ : ದೇಶದಲ್ಲಿ ಇತ್ತೀಚೆಗೆ ಸೀಟ್ ಬೆಲ್ಟ್ ಧರಿಸದ ಕಾರಣದಿಂದ ಅಪಘಾತದಲ್ಲಿ ಉದ್ಯಮಿ ಸೈರಸ್ ಮಿಸ್ಟ್ರಿ ನಿಧನದ ಬೆನ್ನಲ್ಲೇ ಸೀಟ್ ಬೆಲ್ಟ್, ಏರ್ ಬ್ಯಾಗ್ ಕುರಿತ ಚರ್ಚೆ ಮುನ್ನೆಲೆಗೆ ಬಂದಿದೆ.
ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಥಾಣೆ ತಲುಪಿದ ಹಾಂಗ್ ಕಾಂಗ್ನ ಮರ್ಸಿಡಿಸ್ ತಜ್ಞರು
ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲೂ ಏರ್ ಬ್ಯಾಗ್ ಅಳವಡಿಸಲು ಸಿದ್ಧತೆ ನಡೆದಿದ್ದು, ಸ್ಕೂಟರ್ ಗಳಿಗೆ ಏರ್ ಬ್ಯಾಗ್ ವ್ಯವಸ್ಥೆಯ ಪೇಟೆಂಟ್ ಅನ್ನು ಹೋಂಡಾ ಕಂಪನಿ ಪಡೆದುಕೊಂಡಿದೆ. ದೇಶದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚಿದೆ. ಹೀಗಾಗಿ ಸ್ಕೂಟರ್ ಗಳಿಗೆ ಏರ್ ಬ್ಯಾಗ್ ಅಳವಡಿಸಲು ಹೋಂಡಾ ಕಂಪನಿ ಮುಂದಾಗಿದೆ.
BIGG NEWS : ನಿಗದಿತ ಸಮಯದಲ್ಲಿ ಮಹಾಲಕ್ಷ್ಮಿ ಏತನೀರಾವರಿ ಯೋಜನೆ ಪೂರ್ಣ : ಸಿಎಂ ಬೊಮ್ಮಾಯಿ ಭರವಸೆ
ಹೋಂಡಾ ಕಂಪನಿಯ ಪ್ರಕಾರ, ಸ್ಕೂಟರ್ ಗಳ ಹ್ಯಾಂಡಲ್ ಬಾರ್ ಇರುವ ಕಡೆಯಲ್ಲಿ ಏರ್ ಬ್ಯಾಗ್ ಅಳವಡಿಸಲಾಗುತ್ತದೆ. ಏರ್ ಬ್ಯಾಗ್ ಪಕ್ಕದಲ್ಲಿ ಇನ್ ಪ್ಲೇಟರ್ ಅಳವಡಿಸಲಾಗುತ್ತದೆ. ಜೊತೆಗೆ ಅಪಘಾತಗಳನ್ನು ಪತ್ತೆಹಚ್ಚಲು ಹಾಗೂ ಏರ್ ಬ್ಯಾಗ್ ತೆರೆಯುವಂತೆ ಸಂದೇಶ ಕಳುಹಿಸಲು ಸ್ಕೂಟರ್ ನಲ್ಲಿ ವೇಗವರ್ಧಕವನ್ನು ಬಳಸಲಾಗುತ್ತದೆ.