ಕೊಪ್ಪಳ : ಅಕ್ರಮ ಮರಳು ಗಾಣಿಗಾರಿಕೆ ನಡೆಯದಂತೆ ಜಿಲ್ಲಾ ಹಾಗೂ ತಾಲೂಕಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ. ಕನಕಗಿರಿ ತಾಲೂಕು ಕ್ಯಾರಿಹಾಳ ವ್ಯಾಪ್ತಿಯಲಿ ಸರ್ವೆ ನಂಬರ್ 58/1, 58/2, 58/3, 58/4 ಗಳಲ್ಲಿ ಅನಧೀಕೃತವಾಗಿ ಮರಳು ಕಣಿಗಾರಿಕೆ ಮತ್ತು ಸಾಗಾಣಿಕೆ ನಡೆಯುತ್ತಿದೆ ಎನ್ನುವ ಮಾಹಿತಿ ಆಧರಿಸಿ ನವೆಂಬರ್ 4ರಂದು ಎಫ್ಐಆರ್ ದಾಖಲಿಸಿ ಬಿಸಿ ಮುಟ್ಟಿಸಲಾಗಿದೆ.
ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಅವರ ನೇತೃತ್ವದಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಕಂದಾಯ ಇಲಾಖೆಯ ಅಧಿಕಾರಿಗಳು ನವೆಂಬರ್ 05ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಕ್ರಮ ಗಣಿಗಾರಿಕೆ ಮತ್ತು ಸಾಗಣೆ ಕಂಡುಬಂದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳಾದ ಜಮೀನಿನ ಮೇಲೆ ಭೋಜ ಕೂರಿಸುವುದು, ದಂಡ ದಂಡ ವಿಧಿಸುವ ಮತ್ತು ಇತರೆ ಕಾನೂನು ವ್ಯಾಪ್ತಿಯ ಕ್ರಮಗಳನ್ನು ಶಿಫಾರಸ್ಸಿಗೆ ಕ್ರಮ ವಹಿಸಲಾಯಿತು.
ಕನಕಗಿರಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಗಾರಿಕೆಯ ಚಟುವಟಿಕೆಗಳನ್ನು ನಿಯಂತ್ರಿಸಲು ಕಂದಾಯ ಇಲಾಖೆ, ಗಣಿ ಹಾಗೂ ಪೊಲೀಸ್ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡು ವಿಶೇಷ ತಂಡ ರಚಿಸಿ ಅವರಿಂದ ನಿಯಂತ್ರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಅವರು ತಿಳಿಸಿದ್ದಾರೆ.