ಮೈಸೂರು : ವಿಧಾನಸಭೆ ಅಧಿವೇಶನಕ್ಕೆ ಗೈರು ಹಾಜರಾಗಿರುವುದರ ಕುರಿತಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಕಾಲು ನೋವು ಇರುವುದರಿಂದ ಕಲಾಪದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ.
ಕೆಲವೇ ಸೆಕೆಂಡುಗಳಲ್ಲಿ ತಲೆಗೆ 2 ಬಾರಿ ಪೆಟ್ಟು… ಬೈಕ್ ಸವಾರನ ಪ್ರಾಣ ಉಳಿಸಿದ ʻಹೆಲ್ಮೇಟ್ʼ… Video
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲು ನೋವು ಇರುವುದರಿಂದ ಕಲಾಪದಲ್ಲಿ ಭಾಗಿಯಾಗಿಲ್ಲ. ಬೇಸರದಿಂದ ಸದನಕ್ಕೆ ಹೋಗಿಲ್ ಎಂಬ ಮಾತಿನಲ್ಲಿ ಅರ್ಥವಿಲ್ಲ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಸದನಕ್ಕೆ ಹೋಗಿಲ್ಲ ಎಂಬುದು ಸುಳ್ಳು ಸಚಿವ ಸ್ಥಾಣ ಮತ್ತು ಕಲಾಪಕ್ಕೆ ಗೈರು ಹಾಜರಿಗೂ ಸಂಬಂಧ ಇಲ್ಲ ಎಂದರು.
ನನಗೆ ಸಚಿವ ಸ್ಥಾನ ನೀಡದಿದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ಆರೋಪ ಬಂದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಕೇಂದ್ರ, ರಾಜ್ಯ ನಾಯಕರು ರಾಜೀನಾಮೆ ನೀಡಬೇಡಿ ಎಂದಿದ್ದರು. ಎಫ್ ಐಆರ್ ಆದ ಮೇಲೆ ಸರಿಯಲ್ಲ ಎಂದು ಒಪ್ಪಿಸಿ ರಾಜೀನಾಮೆ ನೀಡಿದ್ದೇನೆ. ಇದೀಗ ಆರೋಪ ಮುಕ್ತನಾಗಿ ಹೊರ ಬಂದಿದ್ದೇನೆ ಎಂದರು.