ಮಂಗಳೂರು : ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣ ಸಂಬಂಧ ಮಂಗಳೂರಿಗೆ ನಾಲ್ವರು ಅಧಿಕಾರಿಗಳಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ ತಂಡ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದೆ.
ಮಧ್ಯಪ್ರದೇಶ: ಪ್ರೇಮಿಯನ್ನು ವಿವಾಹವಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ
ಈ ನಡುವೆ ಸ್ಪೋಟಗೊಂಡ ಆಟೋದಲ್ಲಿ ಆಧಾರ್ ಕಾರ್ಡ್ ವೊಂದು ಪತ್ತೆಯಾಗಿದ್ದು, ಆಟೋದಲ್ಲಿ ಪತ್ತೆಯಾದ ಆಧಾರ್ ಕಾರ್ಡ್, ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹೆಸರಿನಲ್ಲಿದೆ. ಹುಬ್ಬಳಿ ಮೂಲದ ಪ್ರೇಮರಾಜ್ ಹುಟಗಿ ಎಂಬುವವರು ತುಮಕೂರಿನಲ್ಲಿ ರೈಲ್ವೆ ಸಿಬ್ಬಂದಿ. ರೈಲ್ವೆ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸ ಮಾಡ್ತಿರುವ ಪ್ರೇಮರಾಜ್ ಹುಟಗಿ, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.
ಮಂಗಳೂರಿನ ಗರೋಡಿ ಸಮೀಪ ನಿನ್ನೆ ಸಂಜೆ ಆಟೋ ರಿಕ್ಷಾ ಸಂಭವಿಸಿದ ಸ್ಪೋಟಕ ಪ್ರಕರಣದ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಇನ್ನು ಮಂಗಳೂರಿನಲ್ಲಿ ನಿನ್ನೆ ಸಂಜೆ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ನಿನ್ನೆ ಸ್ಪೋಟದಲ್ಲಿ ಭಾಗಿಯಾದವನ ಮತ್ತೊಂದು ಹೆಸರು ಪತ್ತೆಯಾಗಿದ್ದು, ನಿನ್ನೆ ಸ್ಪೋಟದಲ್ಲಿ ಭಾಗಿಯಾದವನ ಹೆಸರು ಯೂನಸ್ ಖಾನ್ ಎಂದು ಗುರುತಿಸಲಾಗಿದೆ.