ಕಲಬುರಗಿ : 545 ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಅಭ್ಯರ್ಥಿಗಳಿಗೆ ಬ್ಲೂಟೂತ್ ಸರಬರಾಜು ಮಾಡಿದ ಆರೋಪದಡಿ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ಪ ಬಸಪ್ಪ ಹನುಮಗೊಂಡ (32) ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆದು ಅಕ್ರಮದಲ್ಲಿ ಬಂಧಿತರಾದ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಸ್ ಪೂರೈಕೆ ಮಾಡಿ ಉತ್ತರಗಳನ್ನು ಕಲಬುರಗಿಯಿಂದಲೇ ಪೂರೈಸಿದ್ದರು.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಅ.13 ರಂದು ತುಮಕೂರಿನಲ್ಲಿ ಪ್ರಕರಣ ದಾಖಲಾಗುತ್ತಿದದಂತೆಯೇ ಈತ ನಾಪತ್ತೆಯಾಗಿದ್ದ. ಶ್ರೀಶೈಲನಿಗೆ ಬ್ಲೂಟೂನ್, ಉತ್ತರ ಪೂರೈಸಿದ್ದನು.
BREAKING NEWS: ಮಿಜೋರಾಂನಲ್ಲಿ ಕಲ್ಲು ಕ್ವಾರಿ ಕುಸಿತ: 8 ಮಂದಿ ಕಾರ್ಮಿಕರ ದುರ್ಮರಣ, ನಾಲ್ವರಿಗಾಗಿ ಶೋಧ