ಬೆಂಗಳೂರು : ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಮುಂದುವರೆದಿದ್ದು, ರಾಜ್ಯದ 13 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಒಟ್ಟು 13 ಮಂದಿ ಬಲಿಯಾಗಿದ್ದಾರೆ.
BIGG NEWS : ದಾವಣಗೆರೆಯಲ್ಲಿ ಇಂದು `ಸಿದ್ದರಾಮಯ್ಯ ಅಮೃತೋತ್ಸವ’ : ರಾಹುಲ್ ಗಾಂಧಿ ಸೇರಿ ಘಟನಾನುಘಟಿಗಳು ಭಾಗಿ
ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ರಾಜ್ಯದ ಹಲವೆಡೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು, ಮಂಡ್ಯ, ರಾಮನಗರ, ಹಾಸನ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ಜನರು ಪರದಾಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಭಟ್ಟಕಳದ ಮನೆಯೊಂದರ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿದ್ದು ಸೇರಿ ರಾಜ್ಯದಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಒಟ್ಟು 11 ಮಂದಿ ಬಲಿಯಾಗಿದ್ದಾರೆ. ಭಟ್ಕದಲ್ಲಿ 400 ಕ್ಕೂ ಹೆಚ್ಚು ಸೇರಿ ರಾಜ್ಯಾದ್ಯಂತ 550 ಹೆಚ್ಚು ಮನೆಗಳು ಜಲಾವೃತವಾಗಿದ್ದು, ಜನಜೀವನ ಅಸ್ವಸ್ಥಗೊಂಡಿದೆ.
ವಿಜಯನಗರ ಜಿಲ್ಲೆ ಗರಗ-ನಾಗಲಾಪುರದಲ್ಲಿ ಹಳ್ಳ ದಾಟುವಾಗ ರೈತ ಬೊಮ್ಮಪ್ಪ, ತುಮಕೂರು ಜಿಲ್ಲೆಯ ಶಿರಾದ ಚೆನ್ನನಕುಂಟೆಯಲ್ಲಿ ಬೈಕ್ ನಲ್ಲಿ ಹಳ್ಳದಾಟುವಾಗಿ ಶಿಕ್ಷಕ ಆರೀಫ್ ಉಲ್ಲಾ (55), ಬಳ್ಳಾರಿ ಸಂಡೂರ ತಾಲೂಕಿನ ಂಕಮನಾಳದಲ್ಲಿ ಬೈಕ್ ನಲ್ಲಿ ಸೇತುವೆ ದಾಟುವಾಗ ಕೃಷ್ಣಕುಮಾರ್ ಮತ್ತು ಮೈಸೂರಿನ ಪಿರಿಯಾಪಟ್ಟಣದಲ್ಲಿ ಕೆಲ್ಲೂರು-ಹೊಸಕೋಟ ಸೇತುವೆ ಸಾಗುತ್ತಿದ್ದ ಕೆರೆಏರಿ ಮೇಲೆ ಬೈಕ್ ನಿಂದ ಬಿದ್ದು ಕಾರ್ತಿಕ್ (17) ಮೃತಪಟ್ಟಿದ್ದಾರೆ.
BREAKING NEWS: ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದ ರಾಹುಲ್ ಗಾಂಧಿ, ನಾಳೆಯ ಸಿದ್ದರಾಮೋತ್ಸವದಲ್ಲಿ ಭಾಗಿ