ಬೆಂಗಳೂರು : ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ
ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಧ್ವನಿವರ್ಧಕ ಬಳಕೆ ನಿಷೇಧಕ್ಕೆ ಹಿಂದೂಪರ ಸಂಘಟನೆಗಳು ರಾಜ್ಯ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿತ್ತು. ಅದರಂತೆ ಕ್ರಮಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರ, ಇದೀಗ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಿದ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ
ಇನ್ನೊಂದೆಡೆ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸುತ್ತಿವೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 17,850 ಧ್ವನಿ ವರ್ಧಕಗಳ ಬಳಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಪೈಕಿ 3 ಸಾವಿರ ದೇವಸ್ಥಾನಗಳಿಗೆ, 1,400 ಚರ್ಚೆಗಳಿಗೆ ಹಾಗೂ 10,889 ಮಸೀದಿಗಳಲ್ಲಿ ಮೈಕ್ ಬಳಕೆಗೆ ಸರ್ಕಾರದಿಂದ ಅನುಮತಿ ದೊರೆತಿದೆ. ಇವತ್ತು ಶಬ್ಧ ಮಾಲಿನ್ಯ ಆಗುತ್ತಾ ಇರುವುದು ಮಂದಿರಗಳಿಂದ ಅಲ್ಲ, ಮಸೀದಿಗಳಿಂದ. ಮಸೀದಿಗಳಿಗೆ ಯಾವ ಆಧಾರದ ಮೇಲೆ ಅನುಮತಿ ಕೊಟ್ಟಿದ್ದೀರಿ ಎಂದು ಮುತಾಲಿಕ್ ಖಾರವಾಗಿ ಪ್ರಶ್ನಿಸಿದ್ದಾರೆ.
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ
ಬರೋಬ್ಬರಿ 10,889 ಮಸೀದಿಗಳಿಗೆ ಅನುಮತಿ ನೀಡಲಾಗಿದ್ದು, ಬೆಂಗಳೂರಿನಲ್ಲೇ 1,841 ಮಸೀದಿಗಳ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡಲಾಗಿದೆ. ಈಗಲೂ ಒಂದೇ ಮಸೀದಿ ಮೇಲೆ 4-8 ಮೈಕ್ಗಳನ್ನ ಬಳಸಲಾಗುತ್ತಿದೆ. ಹೀಗಿದ್ದಾಗಲೂ ಅವಕಾಶ ನೀಡಿರುವುದು ದೊಡ್ಡ ಪ್ರಮೇಯ ಸೃಷ್ಟಿಯಾಗಿದೆ. ಕೂಡಲೇ ಸರ್ಕಾರ ಈ ಆದೇಶವನ್ನ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಬಹುತೇಕ ಮಸೀದಿಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಆಜಾನ್ ಕೂಗಲಾಗುತ್ತಿದೆ. ಮಸೀದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ, ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ಆಸ್ಪತ್ರೆ, ವಿದ್ಯಾರ್ಥಿಗಳಿಗೆ, ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಮಸೀದಿಗಳ ಮುಂಭಾಗ ಅಗತ್ಯ ಪೊಲೀಸ್ ಇಲಾಖೆಯಿಂದ ಒಂದು ಪಡೆ ರಚಿಸಿ ಕಾನೂನುಬಾಹಿರ ಮಸೀದಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ. ಬೂಟಾಟಿಕೆ, ನಾಟಕ, ಕಣ್ಣೊರೆಸುವ ತಂತ್ರಗಾರಿಕೆ ಬೇಡ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು
BIGG NEWS: ಹಾಸನಾಂಬೆ ದೇಗುಲದ ಬಳಿ ಗಿಳಿ ಶಾಸ್ತ್ರ ಕೇಳಿದ ಸಿಟಿ ರವಿ;ನಿಮ್ಮ ಕೈ ರೇಖೆ ಚೆನ್ನಾಗಿದೆ ಎಂದು ಜ್ಯೋತಿಷ್ಯ