ಚಿತ್ರದುರ್ಗ : ಅಪ್ರಾಪ್ತರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು 2 ನೇ ಅಪರ ಜಿಲ್ಲಾ ಕೋರ್ಟ್ ಎದುರು ಶುಕ್ರವಾರ ಹಾಜರುಪಡಿಸಲಾಗಿದ್ದು, ಸೆ. 5 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಮುರುಘಾಶ್ರೀಗಳನ್ನು ಇಂದು ಚಿತ್ರದುರ್ಗದ ಡಿವೈಎಸ್ ಪಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಚಿತ್ರದುರ್ಗದ ಡಿವೈಎಸ್ ಪಿ ಕಚೇರಿ ಸುತ್ತಮುತ್ತ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಡಿವೈಎಸ್ ಪಿ ಕಚೇರಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಡಿವೈಎಸ್ ಪಿ ಕಚೇರಿಯಲ್ಲೇ ಶ್ರೀಗಳ ವಿಚಾರಣೆ ನಡೆಯಲಿದ್ದು, ಈಗಾಗಲೇ ವೈದ್ಯರು ಆಗಮಿಸಿದ್ದಾರೆ.
BIGG NEWS : ಅಗ್ನಿಪಥ್ ನೇಮಕಾತಿ : ನಕಲಿ ದಾಖಲೆ ಸಲ್ಲಿಸಿದರೆ ಪೊಲೀಸ್ ವಶದ ಎಚ್ಚರಿಕೆ
ಪೋಕ್ಸೋ ಕಾಯ್ದೆ ಪ್ರಕರಣದಡಿ ಗುರುವಾರ ರಾತ್ರಿ ಮುರುಘಾಶರಣರನ್ನು ಬಂಧಿಸಿದ್ದ ಪೊಲೀಸರು ತಡರಾತ್ರಿ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದಾಗ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಜಡ್ಜ್ ಆದೇಶಿಸಿದ್ದರು.
BIG NEWS: ಹೆರಿಗೆ ವೇಳೆ ಮಗು ಮೃತಪಟ್ಟರೆ ಮಹಿಳಾ ನೌಕರರಿಗೆ 60 ದಿನ ವಿಶೇಷ ರಜೆ: ಕೇಂದ್ರ ಸರ್ಕಾರ