ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ನಲ್ಲಿ ಭಾರತದ ಹಿರಿಯ ಸ್ಟಾರ್ ಶರತ್, ಯುವ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಫೈನಲ್ ಗೆದ್ದು ಚಿನ್ನದ ಪದಕ ಗೆದ್ದರು.
ಕಾಮನ್ವೆಲ್ತ್ ಗೇಮ್ಸ್ 2022 ರ ಒಂಬತ್ತನೇ ದಿನವಾದ ಭಾನುವಾರ, 40 ವರ್ಷದ ಶರತ್ ಮತ್ತು 24 ವರ್ಷದ ಶ್ರೀಜಾ ಅವರು ಮಲೇಷ್ಯಾವನ್ನು 3-1 ರಿಂದ ಸೋಲಿಸಿ ಚಿನ್ನ ಗೆದ್ದರು. ಇದು ಶ್ರೀಜಾ ಅವರ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದ ಪದಕವಾಗಿದ್ದರೆ, ಶರತ್ ಅವರ 12 ನೇ ಪದಕವಾಗಿದೆ.
GOLD FOR SHARATH AND SREEJA 🔥
🇮🇳's dynamic #TableTennis Mixed Doubles 🏓pair – the young sensation #SreejaAkula & the evergreen @sharathkamal1 team up to clinch the GOLD 🥇 at #CommonwealthGames2022
🇮🇳 wins 3-1 against 🇲🇾 in the XD final
A pairing to remember! 🤩#Cheer4India pic.twitter.com/oFRtlnOOjQ
— SAI Media (@Media_SAI) August 7, 2022
ತಮ್ಮ ಐದನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದ ಅಚಂತಾ ಮತ್ತು ಮೊದಲ ಬಾರಿಗೆ ಕ್ರೀಡಾಕೂಟದ ಭಾಗವಾಗಿದ್ದ ಶ್ರೀಜಾ ಜೋಡಿ 11-4, 9-11, 11-5, 11-6 ಸೆಟ್ ಗಳಿಂದ ಮಲೇಷ್ಯಾದ ಜಾವಾನ್ ಚುಂಗ್ ಮತ್ತು ಕರೆನ್ ಲೈನ್ ಅವರನ್ನು ಸೋಲಿಸಿ ಕ್ರೀಡಾಕೂಟದಲ್ಲಿ ಟಿಟಿಯ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಇದಕ್ಕೂ ಮುನ್ನ ಶರತ್ ಅವರು ಜಿ ಸತ್ಯನ್, ಹರ್ಮೀತ್ ದೇಸಾಯಿ ಮತ್ತು ಸನಿಲ್ ಶೆಟ್ಟಿ ಅವರೊಂದಿಗೆ ಸೇರಿಕೊಂಡು ಪುರುಷರ ಡಬಲ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.