ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಛಾಪಾ ಕಾಗದ ಹಗರಣ ಬಯಲಿಗೆ ಬಂದಿದ್ದು, ನಕಲಿ ಛಾಪಾ ಕಾಗದ ಹಗರಣ ಸಂಬಂಧ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ.
WATCH VIDEO: ಬುದ್ದಿಮಾಂಧ್ಯ ಹೆತ್ತ ಮಗು ಕೊಂದ ಪಾಪಿ ತಾಯಿ : ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬೆಂಗಳೂರಿನಲ್ಲಿ ನಕಲಿ ಛಾಪಾ ಹಗರಣ ಸಂಬಂಧ 11 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಡೆಯರ ಕಾಲದ ಛಾಪಾ ಕಾಗದಗಳು ಸೇರಿದಂತೆ 2,664 ಛಾಪಾ ಕಾಗದ ಜಪ್ತಿ ಮಾಡಲಾಗಿದೆ. ಛಾಪಾ ಕಾಗದದ ಮೂಲಕ ಆರೋಪಿಗಳು ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದರು.
ಬಂಧಿತ ಆರೋಪಿಗಳು 1990, 1995, 2002 ಹಾಗೂ 2009ರ ರಿಜಿಸ್ಟರ್ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಜಿಪಿಎ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿಯಲಿದೆ. ಬಂಧಿತರಿಂದ 100ಕ್ಕೂ ಹೆಚ್ಚು ಸೀಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
BIGG NEWS : ಪುಷ್ಪಗಿರಿ ಪರ್ವತದಲ್ಲಿ ‘ ಜಲಸ್ಪೋಟ’ : ಗುಳಿಕಾನ ಗ್ರಾಮದಲ್ಲಿ ʼ6 ಕುಟುಂಬಗಳ 21 ಜನರನ್ನು ಸ್ಥಳಾಂತರʼ