ಸಿನಿಮಾಡೆಸ್ಕ್ : ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಗೆ ಡೇಟ್ ಫಿಕ್ಸ್ ಆಗಿದ್ದು, ಸೆಪ್ಟೆಂಬರ್ 24ಕ್ಕೆ ಬಿಸ್ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್ ಇದೆ. ಖಡಕ್ ಲುಕ್ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಶೋ ದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ.
BIG BREAKING NEWS: ಲಕ್ನೋದಲ್ಲಿ ಭಾರೀ ಮಳೆಗೆ ಗೋಡೆ ಕುಸಿದು 10 ಮಂದಿ ಸಾವು | Lucknow wall collapses
ಕಲರ್ಸ್ ಕನ್ನಡ ವಾಹಿನಿಯು ಹೊಸದೊಂದು ಪ್ರೋಮೋ ರಿಲೀಸ್ ಮಾಡಿದೆ. ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ಗ್ರ್ಯಾಂಡ್ ಓಪನಿಂಗ್ ಸಂಜೆ 6 ಗಂಟೆಗೆ ಶುರುವಾಗಲಿದೆ. ಈ ಶೋ ನಿತ್ಯ 9.30ಗೆ ಪ್ರಸಾರ ಆಗಲಿದೆ. ಈ ಶೋನಲ್ಲಿ ಪ್ರವೀಣರ ಜೊತೆ ನವೀನರು ಇರಲಿದ್ದಾರಂತೆ. ಬಿಗ್ ಬಾಸ್ ಕನ್ನಡ ಓಟಿಟಿ ಶೋ ಸ್ಪರ್ಧಿಗಳ ಜೊತೆ ಹೊಸಬರು ಇರಲಿದ್ದಾರಂತೆ.
BIG BREAKING NEWS: ಲಕ್ನೋನಲ್ಲಿ ಭೀಕರ ದುರಂತ, ಮನೆಯ ಗೋಡೆ ಕುಸಿದು 10 ಮಂದಿ ಸಾವು
ಪ್ರೋಮೋದಲ್ಲಿ ಈ ಹಿಂದಿನ ಸೀಸನ್ ಸ್ಪರ್ಧಿಗಳಾದ ಅನುಪಮಾ ಗೌಡ, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ದೀಪಿಕಾ ದಾಸ್ ಕೂಡ ಕಾಣಿಸಿಕೊಂಡಿದ್ದು, ಕನ್ನಡದ ಬಿಗ್ ಬಾಸ್ 9 ಬರುತ್ತಿದೆ ಎಂದು ಹೇಳಿದ್ದಾರೆ. ನೂರು ದಿನಗಳಿಗೂ ಅಧಿಕ ಕಾಲ ಈ ಶೋ ಪ್ರಸಾರ ಆಗಬಹುದು. ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 9 ಶೋನಲ್ಲಿ ಯಾರು ಯಾರು ಭಾಗವಹಿಸಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.