ಬೆಂಗಳೂರು: ನಟ ದುನಿಯಾ ವಿಜಯ್ ( Actor Duniya Vijay ) ಹಾಗೂ ಪಾನಿಪೂರಿ ಕಿಟ್ಟಿ ನಡುವಿನ ಗಲಾಟೆಗೆ ಈಗ ಮತ್ತೆ ಮರುಜೀವ ಬಂದಿದೆ. ಪಾನಿಪೂರಿ ಕಿಟ್ಟಿ ವಿರುದ್ಧ ದಾಖಲಾಗಿದ್ದಂತ ಎಫ್ಐಆರ್ ರದ್ದು ಪ್ರಶ್ನಿಸಿ ನಟ ವಿಜಿ ಸಲ್ಲಿಸಿದ್ದಂತ ಮೇಲ್ಮನವಿಗೆ ಹೈಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ಈಗ ಪಾನಿಪೂರಿ ಕಿಟ್ಟಿ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಾಗಲಿದೆ.
‘ಬಿಜೆಪಿ ಆಡಳಿತದಲ್ಲಿ ರಕ್ಷಕರೇ ಭಕ್ಷಕರಾಗಿದ್ದಾರೆ’ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
2018ರಲ್ಲಿ ನಟ ದುನಿಯಾ ವಿಜಿ ಹಾಗೂ ಪಾನಿಪೂರಿ ಕಿಟ್ಟಿ ನಡುವೆ ಅಂಬೇಡ್ಕರ್ ಭವನದಲ್ಲಿ ನಡೆದ ಘಟನೆ ಸಂಬಂಧ ದೂರು-ಪ್ರತಿದೂರು ದಾಖಲಾಗಿತ್ತು. ಕಾರಿಗೆ ಹಾನಿ, ಜೀವಬೆದರಿಕೆ ಬಗ್ಗೆ ನಟ ದುನಿಯಾ ವಿಜಿ ದೂರು ನೀಡಿದ್ದರು. ಆದ್ರೇ ಪಾನಿಪುರಿ ಕಿಟ್ಟಿ ಎಫ್ಐಆರ್ ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ಕೋರ್ಟ್, ಎಫ್ಐಆರ್ ರದ್ದು ಪಡಿಸಿತ್ತು.
ಶಿವಮೊಗ್ಗ: ಡಿ.14ರ ನಾಳೆ, ಡಿ.15ರ ನಾಡಿದ್ದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ನಟ ದುನಿಯಾ ವಿಜಿ ಈ ಬಗ್ಗೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ನಟ ದುನಿಯಾ ವಿಜಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಪಾನಿಪೂರಿ ಕಿಟ್ಟಿ, ಮಾರುತಿ ವಿರುದ್ಧ ಹೊಸದಾಗಿ ಎಫ್ಐಆರ್ ದಾಖಲಿಸುವಂತೆ ಸೂಚಿಸಿದೆ. ಈ ಹಿಂದೆ ನಟ ದುನಿಯಾ ವಿಜಿ ಕಿಡ್ನ್ಯಾಪ್, ಹಲ್ಲೆ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿದ್ದರು.
SHOCKING : ಪತ್ನಿ , ನಾಲ್ಕು ಮಕ್ಕಳನ್ನು ಬರ್ಬರವಾಗಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಕಿರಾತಕ
ಅಂದಹಾಗೇ ನಟ ದುನಿಯಾ ವಿಜಯ್ ಹಾಗೂ ಅವರ ಪುತ್ರ ಸಾಮ್ರಾಟ್ ಗೆ ಜೀವ ಬೆದರಿಕೆ ಆರೋಪದಡಿ ಜಿಮ್ ತರಬೇತುದಾರ ಕೃಷ್ಣಮೂರ್ತಿ ಆಲಿಯಾಸ್ ಪಾನಿಪೂರಿ ಕಿಟ್ಟಿ ವಿರುದ್ಧ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಬಳಿಕ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಗಲಾಟೆ ವಿಚಾರವಾಗಿ ವಿಜಯ್ ನೀಡಿದ್ದ ದೂರನ್ನು ಮೊದಲು ಎನ್ ಸಿ ಆರ್ ಎಂದು ಪರಿಗಣಿಸಿದ್ದ ಪೊಲೀಸರು, ಕೋರ್ಟ್ ಸೂಚನೆ ನಂತ್ರ ಎಫ್ಐಆರ್ ದಾಖಲಿಸಿದ್ದರು.