ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆಯ ಸಿಪಿಐ ಆಗಿದ್ದಂತ ಉಮೇಶ್ ಅವರು ಯುವತಿಯೊಬ್ಬರಿಗೆ ಬೆದರಿಕೆ ಹಾಕಿದ್ದಲ್ಲದೇ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಅವರನ್ನು ಅಮಾನತು ಕೂಡ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪ ಮಾಡಿದ್ದಂತ ಯುವತಿಯೇ ಲೈಂಗಿಕ ದೌರ್ಜನ್ಯ ಆಗಿಲ್ಲವೆಂಬುದಾಗಿ ಯೂಟರ್ನ್ ಹೊಡೆದಿದ್ದಾರೆ.
BREAKING NEWS : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ : ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ಇಂದು ಮಹಿಳಾ ಪೊಲೀಸ್ ಠಾಣೆಗೆ ತೆರಳಿರುವಂತ ತೆರಳಿರುವಂತ ಸಿಪಿಐ ಉಮೇಶ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಂತ ಯುವತಿಯು, ನಾನು ಮಾನಸಿಕ ಒತ್ತಡಿಂದ ದೂರು ನೀಡಿದ್ದೆನು. ಸಿಪಿಐರಿಂದ ಲೈಂಗಿಕ ದೌರ್ಜನ್ಯವೇ ಆಗಿಲ್ಲ ಎಂಬುದಾಗಿ ಮರು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯನ್ನು ಪೊಲೀಸ್ ಠಾಣೆಯಲ್ಲಿ ಮರು ದಾಖಲಿಸಲಾಗಿದೆ.
ಯುವತಿ ಮೇಲೆ ಅತ್ಯಾಚಾರ, ಜೀವ ಬೆದರಿಕೆ ಆರೋಪ : ಸಿಪಿಐ ಉಮೇಶ್ ಅಮಾನತುಗೊಳಿಸಿ ಐಜಿಪಿ ಆದೇಶ
ಚಿತ್ರದುರ್ಗ: ಚಳ್ಳಕೆರೆ ಪೊಲೀಸ್ ಠಾಣೆಯ ಸಿಪಿಐ ಜಿ.ಬಿ ಉಮೇಶ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚಳ್ಳಕೆರೆ ಸಿಪಿಐ ಉಮೇಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
BIGG NEWS : ಆಂಧ್ರದ ಗೋದಾಮಿನಲ್ಲಿ ಬೆಂಕಿ ಅವಘಡ : 10 ಲಕ್ಷ ಮೌಲ್ಯದ ಅಮೆಜಾನ್ ಉತ್ಪನ್ನಗಳು ಭಸ್ಮ
ಶಿವಮೊಗ್ಗದಲ್ಲಿ ಯುವತಿ ಬಿಇಡಿ ಓದುತ್ತಿದ್ದಳು. ಇದೀಗ ಈಕೆ ಸೋದರ ಮಾವನ ಮಗನಾಗಿರುವ ಉಮೇಶ್ ವಿರುದ್ಧ ಚಿತ್ರದುರ್ಗ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. 5 ವರ್ಷದ ಹಿಂದೆ ದಾವಣಗೆರೆಯಲ್ಲಿ ಉಮೇಶ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಾವಣಗೆರೆ ಯಲ್ಲಿ ನಿವೇಶನದ ಸಮಸ್ಯೆ ಹಿನ್ನೆಲೆ ಸಹಾಯ ಕೇಳಿದ್ದೆವು. ಆಗ ದಾವಣಗೆರೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಆರೋಪಿಸದ್ದಳು.
ಇದೀಗ ಘಟನೆ ಸಂಬಂಧ ಸಿಪಿಐ ಉಮೇಶ್ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಆರೋಪ, ಸಿಪಿಐ ಉಮೇಶ್ ಅಮಾನತುಗೊಳಿಸಿ ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ: ಹಳಿ ತಪ್ಪಿದ ಗೂಡ್ಸ್ ರೈಲು, 20 ಬೋಗಿಗಳು ಪಲ್ಟಿ… ಸಂಚಾರದಲ್ಲಿ ವ್ಯತ್ಯಯ
ಆದ್ರೇ ಈ ಘಟನೆಯ ಬೆನ್ನಲ್ಲೇ ಲೈಂಗಿಕ ಆರೋಪ ಮಾಡಿದ್ದಂತ ಯುವತಿ, ತನ್ನ ಮೇಲೆ ಸಿಬಿಐ ಉಮೇಶ್ ಲೈಂಗಿಕ ದೌರ್ಜನ್ಯವೆಸಗಿಲ್ಲ. ನಾನು ಮಾನಸಿಕ ಒತ್ತಡದಲ್ಲಿ ದೂರು ನೀಡಿದ್ದೇನೆ. ಈ ರೀತಿಯ ಘಟನೆಯೇ ನಡೆದಿಲ್ಲ ಎಂಬುದಾಗಿ ಮರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಈಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತೆ ಆಗಿದೆ.
ಅಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಪೂಜೆ : ಅದೊಂದು ಸಂಪ್ರದಾಯ ಎಂದು ಮಾಡಿದ್ದೆ,ಕ್ಷಮಿಸಿ ಎಂದ ಅರ್ಚಕ