ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಎಚ್ಚರ..ಎಚ್ಚರ.. ಮಳೆ ಬಂತು ಎಂದು ಸಂಬಂಧಿಕರ ಮನೆಗೆ ತೆರಳದಿರಿ.. ಇದೀಗ ಖತರ್ನಾಕ್ ಕಳ್ಳತನ ಎಂಟ್ರಿಯಾಗಿದೆ.
ಭೂ ಸೇನಾ ಮುಖ್ಯಸ್ಥ ಲಡಾಖ್ಗೆ ಭೇಟಿ… IAF ಅಪಾಚೆ ಹೆಲಿಕಾಪ್ಟರ್ನಲ್ಲಿ ಜನರಲ್ ʻಮನೋಜ್ ಪಾಂಡೆʼ ಹಾರಾಟ… ವಿಡಿಯೋ
ಮಳೆಯ ಅರ್ಭಟ ಇದ್ದರೂ ಕಳ್ಳರ ಹಾವಳಿ ತಪ್ಪಿಲ್ಲ..ಮಳೆಯಲ್ಲೂ ಖದೀಮರು ನಿಮ್ಮ ಮನೆಗೆ ಕನ್ನಹಾಕುವ ಸಾಧ್ಯತೆ ಹೆಚ್ಚಾಗುತ್ತಿದೆ.
ಇದೀಗ ಇಂತಹದ್ದೇ ಘಟನೆ ಐಟಿ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯ ಆರ್ಭಟಕ್ಕೆ ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಇದೇ ಸಂದರ್ಭದಲ್ಲಿ ಬೆಳ್ಳಂದೂರಿನ ರೈನ್ಬೋ ಲೇಔಟ್ನಲ್ಲಿ ಮಳೆಯ ಸಮಸ್ಯೆಯಿಂದ ಜನರು ವಿಲ್ಲಾ ತೊರೆದು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದ ಕಳ್ಳರ ಕಾಟ ಹೆಚ್ಚಾಗಿದೆ.
ಭೂ ಸೇನಾ ಮುಖ್ಯಸ್ಥ ಲಡಾಖ್ಗೆ ಭೇಟಿ… IAF ಅಪಾಚೆ ಹೆಲಿಕಾಪ್ಟರ್ನಲ್ಲಿ ಜನರಲ್ ʻಮನೋಜ್ ಪಾಂಡೆʼ ಹಾರಾಟ… ವಿಡಿಯೋ
ಇನ್ನೊಂದೆಡೆ ಈ ಲೇಔಟ್ನಲ್ಲಿ ಮಳೆಯ ಆರ್ಭಟಕ್ಕೆ ವಿದ್ಯುತ್ ಸ್ಥಗಿತಗೊಂಡಿದ್ದನ್ನು, ಕಳ್ಳರು ಬಂಡವಾಳ ಮಾಡಿಕೊಂಡು 4 ಮನೆಗಳಿಂದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಈಗಾಗಲೇ ಕಳ್ಳರ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.