ಬೆಂಗಳೂರು: ಬೀದಿ ಬದಿ ತಿಂಡಿ ತಿನಿಸು ಮಾಡೋ ವ್ಯಾಪಾರಿಗಳಿಗೆ ಹೋಟೆಲ್ ಸಂಘದವರಿಂದ ದೊಡ್ಡ ಆಘಾತವೊಂದು ಎದುರಾಗಿದೆ. ಹೌದು, ಬೀದಿ ಬದಿ ತಿಂಡಿ ತಿನಿಸುಗಳ ವ್ಯಾಪಾಡಿಗಳ ವ್ಯವಹಾರಕ್ಕೆ ಬ್ರೇಕ್ ಹಾಕುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದು ಪತ್ರದಲ್ಲಿ ಹಲವು ಕಾರಣಗಳನ್ನು ಉಲ್ಲೇಖ ಮಾಡಲಾಗಿದೆ. ಬೀದಿ ಬದಿಯಲ್ಲಿ ಆಹಾರ ಮಾಡುವವರ ಸ್ವಚ್ಚತೆ ಸೇರಿದಂಥೆ ಅನೈರ್ಮಲ್ಯದಿಂದ ಆಹಾರವನ್ನು ತಯಾರಿಕೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೂಡ ಹೋಟೆಲ್ ಸಂಘದವರು ಮಾಡಿದ್ದಾರೆ.
ಇದಲ್ಲದೇ ಬೀದಿ ಬದಿಯಲ್ಲಿ ಆಹಾರ ಮಾಡುವವರು ಸರಿಯಾಗಿ ಟ್ಯಾಕ್ಸ್ಗಳನ್ನು ಸಹ ಕಟ್ಟುತಿಲ್ಲ ಇದು ಸರ್ಕಾರದ ಬೊಕ್ಕಸಕ್ಕೆ ತೊಂದ್ರೆ ಉಂಟು ಮಾಡುತ್ತಿದೆ, ಇವರನ್ನು ಇಂದಿರ ಕ್ಯಾಂಟಿನ್ ಬಳಿಗೆ ಶಿಫ್ಟ್ ಮಾಡಿದ್ರೆ ಒಳಿತು ಅಂತ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂಹೋಟೆಲ್ ಸಂಘದವರ ಆರೋಪಕ್ಕೆ ಬೀದಿ ಬದಿ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದು, ಅತಿ ಕಡಿಮೆ ಬೆಲೆಗೆ ಜನಸಾಮಾನ್ಯರಿಗೆ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು, ನಮ್ಮ ಹೊಟೆ ಹೊಡೆಯಬೇಡಿ, ನಮ್ಮಿಂದ ಟ್ಯಾಕ್ಸ್ ಕಟ್ಟಿಸಿಕೊಳ್ಳಿ, ನಮ್ಮಿಂದ ಸಾವಿರಾರು ಜನರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದು, ನಾವು ಕೂಡ ಹೊಟ್ಟೆ ಬಟ್ಟೆ ಕಟ್ಟಿ ವ್ಯಾಪಾರ ಮಾಡುತ್ತಿದ್ದೇವೆ, ಕೋವಿಡ್ ಬಳಿಕ ನಮಗೆ ತೊಂದ್ರೆಯಾಗಿದ್ದು, ನಮ್ಮ ಮೇಲೆ ಗದಾಪ್ರಹಾರ ಮಾಡಬೇಡಿ ಅಂತ ಮನವಿ ಮಾಡಿಕೊಂಡಿದ್ದಾರೆ.