ಬೆಂಗಳೂರು: ಕೋಟ್ಯಂತರ ರೂಪಾಯಿ ವಿದ್ಯುತ್ ಶುಲ್ಕ ( Electricity Charges ) ಬಾಕಿ ಇರಿಸಿಕೊಂಡಿರುವ ಬಿ ಡ್ಬ್ಲೂ ಎಸ್ ಎಸ್ ಬಿ( BWSSB), ಬಿಬಿಎಂಪಿ( BBMP ), ತೋಟಗಾರಿಕೆ ಇಲಾಖೆ, ಬಿಡಿಎ ( BDA ), ನಗರ ಸಭೆ ಮತ್ತು ಗ್ರಾಮಸಭೆಗಳಿಗೆ ಬೆಸ್ಕಾಂನ ( BESCOM ) ಹೆಬ್ಬಾಳ ಮತ್ತು ಜಾಲಹಳ್ಳಿ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ಪ್ರತ್ಯೇಕ ನೋಟಿಸ್ ಜಾರಿಗೊಳಿಸಿದ್ದಾರೆ.
BIG BREAKING NEWS: 108 ಆಂಬುಲೆನ್ಸ್ ಸಿಬ್ಬಂದಿಗಳ ಧರಣಿ ಎಚ್ಚರಿಕೆ ಹೆದರಿದ ಜಿವಿಕೆ: 2 ತಿಂಗಳ ಬಾಕಿ ವೇತನ ಬಿಡುಗಡೆ
ಬೆಸ್ಕಾಂನ ಹೆಬ್ಬಾಳ ವಿಭಾಗದ ವ್ಯಾಪ್ತಿಗೆ ಬರುವ ಉಪ ವಿಭಾಗಗಳಾದ ಗಂಗಾನಗರ (ಸಿ-4), ಕಾವಲಬೈರಸಂದ್ರ (ಸಿ-5), ಯಲಹಂಕ (ಸಿ-7) ಮತ್ತು ಸಹಕಾರನಗರ (ಸಿ -8) ಉಪ ವಿಭಾಗಗಳಿಗೆ ಬಿಡ್ಲ್ಯೂ ಎಸ್ ಎಸ್ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ ಸೆಪ್ಟೆಂಬರ್ ಅಂತ್ಯಕ್ಕೆ 131.18 ಕೋಟಿ ರೂಪಾಯಿ ಆಗಿದ್ದು, ಬಾಕಿ ಪಾವತಿಸಲು ಹೆಬ್ಬಾಳ ಕಾರ್ಯನಿರ್ವಾಹಕ ಇಂಜಿನಿಯರ್ ನೋಟಿಸ್ ಜಾರಿಗೊಳಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್: ಆವಿಷ್ಕಾರದ ಜೊತೆಗೆ ಅಭಿವೃದ್ದಿಗೆ ಪೂರಕ ಕೆಲಸ ಮಾಡಲು ಉದ್ಯಮಿಗಳಿಗೆ ಸಿಎಂ ಕರೆ
ನಾಲ್ಕೂ ಉಪ ವಿಭಾಗಗಳಿಗೆ ವಿದ್ಯುತ್ ಶುಲ್ಕ ಬಾಕಿ ಇರಿಸಿಕೊಂಡಿರುವ ಸರಕಾರಿ ಸಂಸ್ಥೆಗಳ ಪೈಕಿ ಬಿಡ್ಬ್ಲೂ ಎಸ್ ಎಸ್ ಬಿ ಅತೀ ಹೆಚ್ಚು 65.09 ಕೋಟಿ ರೂ. ಬಾಕಿ ಇರಿಸಿಕೊಂಡಿದ್ದು, ಬಿಬಿಎಂಪಿ ನೀರು ಸರಬರಾಜು ವಿಭಾಗ 54.53 ಕೋಟಿ ರೂ. ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.
ಮೊದಲ ಬಾರಿಗೆ ‘ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ’ಗೆ ‘ರೋಬೊಟಿಕ್ ತಂತ್ರಜ್ಞಾನ’ ಪರಿಚಯಿಸಿದ ‘ಫೋರ್ಟಿಸ್ ಆಸ್ಪತ್ರೆ’
ಜಾಲಹಳ್ಳಿ ವಿಭಾಗ: ಹಾಗೆಯೇ ಬೆಸ್ಕಾಂನ ಜಾಲಹಳ್ಳಿ ವಿಭಾಗ ವ್ಯಾಪ್ತಿಯ ಉಪ ವಿಭಾಗಗಳಾದ ಜಾಲಹಳ್ಳಿ (ಸಿ 3), ವಿದ್ಯಾರಣ್ಯಪುರ (ಸಿ-9), ಮತ್ತು ಸೋಲದೇವನಹಳ್ಳಿ ( ಎನ್ -9) ಉಪ ವಿಭಾಗಗಳಿಗೆ ಬಿಡ್ಬ್ಲೂ ಎಸ್ ಎಸ್ ಬಿ, ಬಿಡಿಎ, ಬಿಬಿಎಂಪಿ, ತೋಟಗಾರಿಕೆ ಇಲಾಖೆ, ನಗರ ಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೀರು ಸರಬರಾಜು ಮತ್ತು ಬೀದಿ ದ್ವೀಪ ಸ್ಥಾವರಗಳ ವಿದ್ಯುತ್ ಬಾಕಿ ಅಕ್ವೋಬರ್ ಅಂತ್ಯಕ್ಕೆ 99.20 ಕೋಟಿ ರೂ. ಇದ್ದು, ಬಾಕಿ ಪಾವತಿಸಲು ಕೋರಿ ಜಾಲಹಳ್ಳಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನವೆಂಬರ್ 16 ರಂದು ನೋಟಿಸ್ ಜಾರಿಗೊಳಿಸಿದ್ದಾರೆ.
BREAKING NEWS: ತುಮಕೂರಿನಲ್ಲಿ ಅಕ್ರಮವಾಗಿ ಕೂಡಿಟ್ಟ ಬಿಹಾರ ಮೂಲದ 48 ಕಾರ್ಮಿಕರ ರಕ್ಷಣೆ
ವಿದ್ಯುತ್ ಬಾಕಿಯನ್ನು 7 ದಿನಗಳ ಒಳಗೆ ಬೆಸ್ಕಾಂಗೆ ಪಾವತಿಸಲು ಸೂಚಿಸಲಾಗಿದ್ದು, ತಪ್ಪಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎರಡೂ ವಿಭಾಗಗಳ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ನೀಡಿರುವ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ.