ಬೆಂಗಳೂರು: ಲೋಕಸಭಾ ಚುನಾವಣಾ ವೇಳೆಯಲ್ಲಿ ಮಾದಿಗರ ಹೆಸರು ಹೇಳಿಕೊಂಡು ಓಟು ಹಾಕಿಸಿಕೊಂಡು ಈಗ ಒಳಮೀಸಲಾತಿಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಹೋರಾಟದಲ್ಲಿ ಕಾಣಿಸಿಕೊಳ್ಳದೇ ತಲೆ ಮರೆಸಿಕೊಂಡಿದ್ದಾರೆ ಅಂತ ಒಳಮೀಸಲಾತಿ ಸಮುದಾಯದ ಹೋರಾಟಗಾರರು ಕಿಡಿಕಾರುತ್ತಿದ್ದಾರೆ.ಎ ನಾರಾಯಣಸ್ವಾಮಿಯವರು ಪ್ರತಿ ಬಾರಿ ಕೂಡ ಚುನಾವಣೆ ವೇಳೇಯಲ್ಲಿ ಒಳಮೀಸಲಾತಿಯನ್ನು ಬಳಸಿಕೊಂಡು ತಮ್ಮದೇ ಸಮುದಾಯದ ಜನತೆಗೆ ಮೋಸ ಮಾಡುತ್ತಿದ್ದು, ಈಗ ಕೂಡ ಒಳಮೀಸಲಾತಿ ಬಗ್ಗೆ ಯಾವುದೇ ಸೊಲ್ಲು ಎತ್ತುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣ ಎನ್ನಲಾಗಿದೆ.
ಈ ನಡುವೆ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ, ಸೇರಿದಂತೆ ಮಾದಿಗ ಸಮುದಾಯದ ಇತರೆ ಶಾಸಕರು ಹಾಗೂ ಸಚಿವರ ನೈತಿಕತೆಯನ್ನು ಕೂಡ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರಶ್ನೆ ಮಾಡುತ್ತಿದ್ದು, ಚುನಾವಣೆ ವೇಳೇಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಾಗುವುದು ಅಂಥ ಎಚ್ಚರಿಕೆ ನೀಡಿದ್ದಾರೆ.