Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲಿಪುಲೇಖ್ ಭಾರತದ ಅವಿಭಾಜ್ಯ ಅಂಗ: ನೇಪಾಳದ ಹಕ್ಕು ಪ್ರತಿಪಾದನೆ ಆಧಾರರಹಿತ ಎಂದ ಭಾರತ

04/05/2026 7:00 AM

ವಿಧಾನಸಭಾ ಚುನಾವಣೆ ಫಲಿತಾಂಶ 2026 : ಪಂಚರಾಜ್ಯಗಳ ಪಟ್ಟ ಯಾರಿಗೆ? ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭ; ದೇಶಾದ್ಯಂತ ಭಾರಿ ಕುತೂಹಲ!

04/05/2026 6:46 AM

BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು

04/05/2026 6:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಜನಸಾಮಾನ್ಯರಿಗೆ ಬಿಗ್ ಶಾಕ್ : ನಾಳೆಯಿಂದ ನೀರು, ವಿದ್ಯುತ್, ಟೋಲ್ ದರ ಏರಿಕೆ.!
KARNATAKA

ಜನಸಾಮಾನ್ಯರಿಗೆ ಬಿಗ್ ಶಾಕ್ : ನಾಳೆಯಿಂದ ನೀರು, ವಿದ್ಯುತ್, ಟೋಲ್ ದರ ಏರಿಕೆ.!

By kannadanewsnow5731/03/2026 11:30 AM

ಬೆಂಗಳೂರು: ಹೊಸ ಆರ್ಥಿಕ ವರ್ಷದ ಆರಂಭದ ದಿನವಾದ ಏಪ್ರಿಲ್ 1ರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ. ವಿದ್ಯುತ್, ನೀರು ಮತ್ತು ಟೋಲ್ ದರಗಳಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೀವನ ನಿರ್ವಹಣೆ ಮತ್ತಷ್ಟು ಕಷ್ಟವಾಗಲಿದೆ.

ಏಪ್ರಿಲ್ 1ರಿಂದ ಜಾರಿಗೆ ಬರುವ ಪ್ರಮುಖ ಬದಲಾವಣೆಗಳು ಇಲ್ಲಿವೆ:

1. ಟೋಲ್ ದರ ಏರಿಕೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಟೋಲ್ ದರವನ್ನು ಹೆಚ್ಚಿಸಿದೆ.

ಹೆಚ್ಚಳದ ಪ್ರಮಾಣ: ಶೇ. 3ರಿಂದ 5ರಷ್ಟು.

ಕಾರುಗಳು: ಪ್ರತಿ ಪ್ರಯಾಣಕ್ಕೆ 5 ರಿಂದ 10 ರೂ. ಹೆಚ್ಚುವರಿ.

ವಾಣಿಜ್ಯ ವಾಹನಗಳು: 15 ರಿಂದ 40 ರೂ. ವರೆಗೆ ಏರಿಕೆ.

ವಾರ್ಷಿಕ ಪಾಸ್: 3,000 ರೂ. ಇದ್ದ ದರ ಈಗ 3,075 ರೂ. ಗೆ ಏರಿಕೆಯಾಗಲಿದೆ.

ವಿಶೇಷ ಸೂಚನೆ: ಟೋಲ್ಗಳಲ್ಲಿ ಇನ್ಮುಂದೆ ನಗದು ಪಾವತಿ ಸಂಪೂರ್ಣ ಸ್ಥಗಿತಗೊಳ್ಳಲಿದೆ.

2. ನೀರಿನ ದರ ಏರಿಕೆ (ಬೆಂಗಳೂರು)

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರವಾಸಿಗಳಿಗೆ ಶಾಕ್ ನೀಡಿದ್ದು, ನೀರಿನ ದರದಲ್ಲಿ ಶೇ. 3ರಷ್ಟು ಹೆಚ್ಚಳ ಮಾಡಿದೆ. ಇದು ಬೆಂಗಳೂರಿನ ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

3. ವಿದ್ಯುತ್ ದರ ಪರಿಷ್ಕರಣೆ
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (KERC) ಎಸ್ಕಾಂಗಳ ನಷ್ಟ ಸರಿದೂಗಿಸಲು ದರ ಪರಿಷ್ಕರಣೆಗೆ ಅನುಮೋದನೆ ನೀಡಿದೆ.

ಮುಖ್ಯವಾಗಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ಈ ದರ ಏರಿಕೆಯ ಬಿಸಿ ತಟ್ಟಲಿದೆ.

ಇದು 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಇತರ ಪ್ರಮುಖ ಬದಲಾವಣೆಗಳು:
ಹೊಸ ಕಾರ್ಮಿಕ ಸಂಹಿತೆ: ಉದ್ಯೋಗಿಯ ಮೂಲ ವೇತನವು (Basic Pay) ಅವರ ಒಟ್ಟು ವೇತನದ (CTC) ಕನಿಷ್ಠ ಶೇ. 50ರಷ್ಟು ಇರಲೇಬೇಕು.

ರೈಲ್ವೆ ಟಿಕೆಟ್ ರೀಫಂಡ್: ರೈಲು ಹೊರಡುವ 8 ಗಂಟೆ ಮೊದಲು ಮುಂಗಡ ಟಿಕೆಟ್ ರದ್ದುಪಡಿಸಿದರೆ ಮಾತ್ರ ರೀಫಂಡ್ ಸಿಗಲಿದೆ, ಇಲ್ಲವಾದರೆ ಹಣ ವಾಪಸ್ ಸಿಗುವುದಿಲ್ಲ.

ಪ್ಯಾನ್ ಕಾರ್ಡ್ ಕಡ್ಡಾಯ: ಹೋಟೆಲ್ ಅಥವಾ ರೆಸ್ಟೊರೆಂಟ್ ಬಿಲ್ 1 ಲಕ್ಷ ರೂ. ದಾಟಿದರೆ ಪ್ಯಾನ್ ವಿವರ ನೀಡುವುದು ಕಡ್ಡಾಯ.

HRA ಸೌಲಭ್ಯ: ಶೇ. 50ರಷ್ಟು ಹೆಚ್ಆರ್ಎ ಸೌಲಭ್ಯ ನೀಡುವ ನಗರಗಳ ಪಟ್ಟಿಗೆ ಬೆಂಗಳೂರು ಸೇರಿದಂತೆ ಇನ್ನೂ 4 ನಗರಗಳು ಸೇರ್ಪಡೆಯಾಗಿವೆ.

ಆದಾಯ ತೆರಿಗೆ ನಿಯಮ: ಬ್ಯಾಂಕ್ಗಳಲ್ಲಿ ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ಒಳಗಿನ ಠೇವಣಿಗೆ ಪ್ಯಾನ್ ನಮೂದಿಸುವ ಅಗತ್ಯವಿಲ್ಲ.

ಒಟ್ಟಾರೆಯಾಗಿ, ಹೊಸ ಆರ್ಥಿಕ ವರ್ಷದ ಆರಂಭವು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗುವ ಸೂಚನೆ ನೀಡಿದೆ.

Big shock for the common man: Water Electricity toll rates to increase from tomorrow!
Share. Facebook Twitter LinkedIn WhatsApp Email

Related Posts

BIG NEWS : ಪ್ಯಾರಾ ಮೆಡಿಕಲ್ ಕೋರ್ಸ್‌ ಗೆ ಪಿಯುಸಿ ಕಡ್ಡಾಯವಲ್ಲ : ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ

04/05/2026 6:35 AM1 Min Read

BREAKING : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ `ಡಿ.ಎನ್. ಜೀವರಾಜ್‌’ಗೆ ಗೆಲುವು : ಚುನಾವಣಾ ಆಯೋಗ ಅಧಿಕೃತ ಘೋಷಣೆ.!

04/05/2026 6:24 AM1 Min Read

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

04/05/2026 6:17 AM1 Min Read
Recent News

ಲಿಪುಲೇಖ್ ಭಾರತದ ಅವಿಭಾಜ್ಯ ಅಂಗ: ನೇಪಾಳದ ಹಕ್ಕು ಪ್ರತಿಪಾದನೆ ಆಧಾರರಹಿತ ಎಂದ ಭಾರತ

04/05/2026 7:00 AM

ವಿಧಾನಸಭಾ ಚುನಾವಣೆ ಫಲಿತಾಂಶ 2026 : ಪಂಚರಾಜ್ಯಗಳ ಪಟ್ಟ ಯಾರಿಗೆ? ಬೆಳಿಗ್ಗೆ 8 ರಿಂದ ಮತ ಎಣಿಕೆ ಆರಂಭ; ದೇಶಾದ್ಯಂತ ಭಾರಿ ಕುತೂಹಲ!

04/05/2026 6:46 AM

BIG NEWS : ಸೋದರ ಸಂಬಂಧಿಗಳ ಮದುವೆ `ಹಿಂದೂ ವಿವಾಹ ಕಾಯ್ದೆಯಡಿ’ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು

04/05/2026 6:44 AM

BIG NEWS : ಪ್ಯಾರಾ ಮೆಡಿಕಲ್ ಕೋರ್ಸ್‌ ಗೆ ಪಿಯುಸಿ ಕಡ್ಡಾಯವಲ್ಲ : ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ

04/05/2026 6:35 AM
State News
KARNATAKA

BIG NEWS : ಪ್ಯಾರಾ ಮೆಡಿಕಲ್ ಕೋರ್ಸ್‌ ಗೆ ಪಿಯುಸಿ ಕಡ್ಡಾಯವಲ್ಲ : ಸುತ್ತೋಲೆಗೆ ಹೈಕೋರ್ಟ್ ಮಧ್ಯಂತರ ತಡೆ

By kannadanewsnow5704/05/2026 6:35 AM KARNATAKA 1 Min Read

ಬೆಂಗಳೂರು: ಪ್ಯಾರಾ ಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಿ ಹೊರಡಿಸಲಾಗಿದ್ದ ಸುತ್ತೋಲೆಗೆ ಕರ್ನಾಟಕ ಹೈಕೋರ್ಟ್…

BREAKING : ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆಯಲ್ಲಿ ಬಿಜೆಪಿಯ `ಡಿ.ಎನ್. ಜೀವರಾಜ್‌’ಗೆ ಗೆಲುವು : ಚುನಾವಣಾ ಆಯೋಗ ಅಧಿಕೃತ ಘೋಷಣೆ.!

04/05/2026 6:24 AM

BIG NEWS : ಸರ್ಕಾರಿ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ್ಕೆ ಬಂಪರ್ ಕೊಡುಗೆ : 56 ಸಾವಿರ ಹುದ್ದೆಗಳಲ್ಲಿ 32 ಸಾವಿರ ಕಲ್ಯಾಣಕ್ಕೆ ಮೀಸಲು.!

04/05/2026 6:17 AM

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ಸುಪ್ರೀಂ ಕೋರ್ಟ್‌ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ

04/05/2026 6:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.