ಬೆಂಗಳೂರು : ಸಿಲಿಕಾನ್ ಸಿಟಿಯ ವಾಹನ ಸವಾರರೇ ಎಚ್ಚರ.! ಇನ್ಮುಂದೆ ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಸಿಗಲ್ಲ ಇನ್ಶೂರೆನ್ಸ್ ಕ್ಯಾನ್ಸಲ್ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೆಡೆ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ನಿಯಮ ಉಲ್ಲಂಘನೆ ಕೇಸ್ ಹೆಚ್ಚಾಗುತ್ತಿದೆ ಈ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ಕೇಸ್ಗಳು ದಾಖಲಾಗುತ್ತಿವೆ. ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿ 96 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
11 ತಿಂಗಳಲ್ಲಿ ಬರೋಬ್ಬರಿ 164 ಕೋಟಿ ರೂ. ದಂಡದ ಮೊತ್ತ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ಒಂದು ಕೋಟಿ ಕೇಸ್ ಆಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದ ಯಾವ ನಗರದಲ್ಲೂ 1 ಕೋಟಿ ಕೇಸ್ ಹಾಕಿದ ಉದಾಹರಣೆ ಇಲ್ವಂತೆ. ಬೆಂಗಳೂರು ನಗರ ಒಂದರಲ್ಲೇ ಇಷ್ಟು ಕೇಸ್ ದಾಖಲಾಗುತ್ತಿದೆ. ಸಂಚಾರ ದಟ್ಟಣೆಯಲ್ಲಿ ಹೆಸರುವಾಸಿಯಾಗಿದ್ದ ಸಿಲಿಕಾನ್ ಸಿಟಿ ಈಗ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡ ಕಟ್ಟುವಲ್ಲೂ ರೆಕಾರ್ಡ್ ಮಾಡುತ್ತಿದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಇದರಿಂದಾಗಿ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ನಿಯಮ ಉಲ್ಲಂಘನೆ ಮಾಡೋದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಐಟಿಎಂ (ITM) ಸಿಸ್ಟಮ್ ಬಳಕೆಗೆ ಮುಂದಾಗಿದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಐಟಿಎಂ (ITM) ಸಿಸ್ಟಮ್ ಬಳಕೆ ಏನು?
ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ರೆ ಪೊಲೀಸ್ ಇಲಾಖೆ ಟೆಕ್ನಾಲಜಿ ಸ್ಟ್ರೈಕ್ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಕಡಿವಾಣಕ್ಕೆ ಮುಂದಾಗಿದೆ. ನಗರದ ಜಂಕ್ಷನ್ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಆರಂಭಿಸಿದೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡಿದ್ರೆ ಅಂತಹ ವಾಹನ ಮಾಲೀಕರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಇ-ಚಲನ್ ರವಾನೆಯಾಗಲಿದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಜೊತೆಗೆ ಆ ವಾಹನದ ಸವಾರ ಮಾಡಿದ ಉಲ್ಲಂಘನೆ ವೀಡಿಯೋ ಕೂಡ ನೋಟಿಸ್ ಜೊತೆ ಮಾಲೀಕನ ಕೈ ಸೇರಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ 259 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವ ಕ್ಯಾಮೆರಾಗಳು ಮತ್ತು 80 ರೆಡ್ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ನಗರದ ಪ್ರಮುಖ 50 ಜಂಕ್ಷನ್ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ಮೂಲಕ ಸಂಚಾರ ಉಲ್ಲಂಘನೆ ಮಾಡುವವರ ಪತ್ತೆ ಸುಗಮವಾಗಲಿದೆ.
ಪೊಲೀಸರ ಮಾಸ್ಟರ್ ಪ್ಲ್ಯಾನ್ ಏನು?
ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್ಓಸಿ ಕೊಡಬೇಕಾಗುತ್ತದೆ. ಎನ್ಓಸಿ ಕೊಡದಿದ್ರೆ ಇನ್ಶೂರೆನ್ಸ್ ನವೀಕರಣ ಆಗದೇ ಇರುವಂತೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಯೆಲ್ಲೋ ಬೋರ್ಡ್ ಗಾಡಿಗಳ ಎಫ್ಸಿ ಹಾಗೂ ವೈಟ್ ಬೋರ್ಡ್ ಗಾಡಿಗಳ ವಿಮೆ ಮಾಡಿಸಲು ಹೋದಾಗ ಅಲ್ಲಿಯೇ ಫೈನ್ ಕಲೆಕ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಕೆಲವೆ ದಿನಗಳಲ್ಲಿ ಈ ಪ್ಲ್ಯಾನ್ ರೂಪಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಎಟಿಎಂ ಸಿಸ್ಟಮ್ ?
ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕಣ್ಣಿಡುವ ಜೊತೆಗೆ, ಪ್ರತಿ ಮೂಮೆಂಟ್ ರೆಕಾರ್ಡ್ ಮಾಡುತ್ತೆ. 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ನಿಯಮ ಉಲ್ಲಂಘನೆಯಾಗುವುದನ್ನು ರೆಕಾರ್ಡ್ ಮಾಡುತ್ತದೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ತ್ರಿಬಲ್ ರೈಡಿಂಗ್ ಇದ್ರೆ, ಸೀಟ್ ಬೆಲ್ಟ್ ಹಾಕದಿದ್ರೆ, ಜೀಬ್ರಾ ಕ್ರಾಸ್ ದಾಟಿದ್ರೆ ಫೋಟೋ ಕ್ಲಿಕ್ ಮಾಡಿ ದಂಡದ ಬಿಸಿ ಮುಟ್ಟಿಸಲು ಸಹಕಾರಿಯಾಗುತ್ತೆ. ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿರೋ ಕ್ಯಾಮೆರಾಗಳು, ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್ಗಳಲ್ಲೇ ವಿಡಿಯೋ ಜೊತೆ ದಂಡದ ನೋಟೀಸ್ ಬರುತ್ತೆ.
BIG NEWS : ‘ಮಂಡೌಸ್’ ಚಂಡಮಾರುತದ ತೀವ್ರತೆ ಹೆಚ್ಚಳ ಸಾಧ್ಯತೆ: ತಮಿಳುನಾಡಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಮೊಬೈಲ್ನಲ್ಲೆ ಕ್ಯೂಆರ್ ಕೋಡ್ ಮೂಲಕ ಫೈನ್ ಕಟ್ಬೇಕು. ಫೈನ್ ಕಟ್ಟಿಲ್ಲವಾದರೆ, 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಬರುತ್ತೆ. ನೋಟಿಸ್ ಬಂದ ನಂತರ ಠಾಣೆಯಲ್ಲಿ ಫೈನ್ ಕಟ್ಟುವಂತಿಲ್ಲ. ಕೋರ್ಟ್ಗೆ (Court) ಹೋಗಿ ಕಟ್ಟಬೇಕಾಗುತ್ತದೆ. ಈ ಎಲ್ಲಾ ಕ್ರಮಗಳ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸೋದಕ್ಕೆ ಟ್ರಾಫಿಕ್ಗ್ ಪೊಲೀಸರು ಮುಂದಾಗಿದ್ದಾರೆ.