ಬೆಂಗಳೂರು: ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ನಿಂದ ಪ್ರತಿಭಟನೆ ಇಳಿಯಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಕಟ್ಟಡ ಕಲ್ಲು, ಎಂ-ಸ್ಯಾಂಡ್ ಉತ್ಪಾದನೆ ಹಾಗೂ ಸಾಗಣೆ ನಿಲ್ಲಿಸೋ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಕುರಿತಂತೆ ನಿನ್ನೆ ಸಂಘದಿಂದ ಪ್ರತಿಭಟನೆ, ಜಾತ ಹಮ್ಮಿಕೊಳ್ಳಲಾಗಿತ್ತು. ಗುತ್ತಿಗೆದಾರರಿಂದ ರಾಜಧನ ಸಂಗ್ರಹ ಸ್ಥಗಿತ, ಕೆ ಎಂ ಆರ್ ಸಿ ಆರ್ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿರುವಂತ ಅಧ್ಯಕ್ಷ ರವೀಂದ್ರ ಶೆಟ್ಟಿ, ಗುತ್ತಿಗೆದಾರರ ರಾಜಧನ ಸಂಗ್ರಹ ಸ್ಥಗಿತಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುತ್ತಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸೋವರೆಗೆ ರಾಜ್ಯಾಧ್ಯಂತ ಕಟ್ಟಡ ಕಲ್ಲು, ಎಂ-ಸ್ಯಾಂಡ್ ಉತ್ಪಾದನೆ ಹಾಗೂ ಸಾಗಾಣೆ ನಿಲ್ಲಿಸಲಾಗುತ್ತದೆ. ಇದರಿಂದ ಮನೆ ನಿರ್ಮಿಸಲು ಜನಸಾಮಾನ್ಯರಿಗೆ ತೊಂದರೆ ಆದರೇ ನಾವು ಜವಾಬ್ದಾರರಲ್ಲ ಎಂದಿದ್ದಾರೆ.
US blizzard: ಅಮೆರಿಕದ ಹಿಮಮಾರುತಕ್ಕೆ 31 ಬಲಿ, ವಿದ್ಯುತ್ ಕಡಿತ, ಸಂಚಾರ ಅಸ್ತವ್ಯಸ್ತ
BIGG NEWS : ಮೈಸೂರಿನ ವಸತಿ ಶಾಲೆಯಲ್ಲಿ ಘೋರ ದುರಂತ : ವಿದ್ಯುತ್ ಪ್ರವಹಿಸಿ ಬಾಲಕ ಸಾವು
BREAKING NEWS: ಚಾಲೆಂಜಿಂಗ್ ಸ್ಟಾರ್ ದರ್ಶನ ಮೇಲೆ ಚಪ್ಪಲಿ ಎಸೆದ ಪ್ರಕರಣ : ಮೂವರು ಅರೆಸ್ಟ್