ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಈಗ ಹೋಟೆಲ್ ಊಟ ‘ಬಿಸಿ’ ತುಪ್ಪವಾಗಿ ಪರಿಣಮಿಸಿದೆ. ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರದಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ನಗರದ ಬಹುತೇಕ ಹೋಟೆಲ್‌ಗಳು ಹಾಗೂ ದರ್ಶಿನಿಗಳಲ್ಲಿ ತಿಂಡಿ-ತಿನಿಸುಗಳ ಬೆಲೆಯನ್ನು ಸದ್ದಿಲ್ಲದೆಯೇ ಹೆಚ್ಚಿಸಲಾಗಿದೆ.
ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರ್ಮೋಡ ಅಡುಗೆ ಅನಿಲದ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ದರದಲ್ಲಿ ₹497 ಏರಿಕೆಯಾಗಿದೆ. ಮಾರ್ಚ್ 1ರಂದು ₹1,844 ಇದ್ದ ಸಿಲಿಂಡರ್ ಬೆಲೆ ಈಗ ₹2,161ಕ್ಕೆ ತಲುಪಿದೆ. ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯ ಎನ್ನುತ್ತಿದ್ದಾರೆ ಹೋಟೆಲ್ ಮಾಲೀಕರು.
ಬದಲಾದ ದರ ಪಟ್ಟಿ ಇಲ್ಲಿದೆ:
ನಗರದ ವಿವಿಧ ಹೋಟೆಲ್‌ಗಳಲ್ಲಿ ಈಗಿನ ದರಗಳು ಈ ಕೆಳಗಿನಂತಿವೆ:







