ಬೆಂಗಳೂರು: 2025-26ನೇ ಸಾಲಿಗೆ ಬಿ.ಇಡಿ ದಾಖಲಾತಿಗೆ ಇಂದಿನವರೆಗೆ ಅವಕಾಶ ನೀಡಲಾಗಿತ್ತು. ಆದರೇ ಕೆಲವರು ಸೀಟು ಘೋಷಣೆಯ ನಂತ್ರ ದಾಖಲಾತಿ ಪರಿಶೀಲನೆಗೆ ಹಾಜರಾಗಿರಲಿಲ್ಲ. ಹೀಗಾಗಿ ಇಂತಹ ಅಭ್ಯರ್ಥಿಗಳನ್ನು ಬಿ.ಇಡಿ ದಾಖಲಾತಿಗೆ ಪರಿಗಣಿಸಲಾಗುವುದಿಲ್ಲ ಎಂಬುದಾಗಿ ಕೇಂದ್ರಿಕೃತ ದಾಖಲಾತಿ ಘಟಕ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 2025-26ನೇ ಸಾಲಿನ ಬಿಇಡಿ ದಾಖಲಾತಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ನೋಡಲ್ ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು ನಡೆಯುತ್ತಿದ್ದು, ದಿನಾಂಕ 03-11-2025ರ ಇಂದು ಕೊನೆಯ ದಿನವಾಗಿರುತ್ತದೆ ಎಂದಿದೆ.
ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ತಮ್ಮ ವ್ಯಾಪ್ತಿಯ ನೋಡಲ್ ಕೇಂದ್ರಕ್ಕೆ ಮೂಲ ದಾಖಲೆಗಳೊಂದಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರೂ ಅನೇಕ ಮಂದಿ ತಮ್ಮ ದಾಖಲೆಗಳ ಪರಿಶೀಲನೆ ಮಾಡಿಸಿರುವುದಿಲ್ಲ ಎಂದು ಹೇಳಿದೆ.
ಇನ್ನೂ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳನ್ನು 2025-26ನೇ ಸಾಲಿನ ಬಿ.ಇಡಿ ದಾಖಲಾತಿಗೆ ಪರಿಗಣಿಸುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.

BREAKING : ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀಣೇ ತಯಾರಕ `ಪೆನ್ನ ಓಬಳಯ್ಯ’ ನಿಧನ : ಸಿಎಂ ಸಂತಾಪ
BREAKING: ಮಂಡ್ಯದಲ್ಲಿ ಅಕ್ರಮವಾಗಿ 50ಕ್ಕೂ ಹೆಚ್ಚು ದನದ ಕರುಗಳನ್ನು ಮಾರಾಟಕ್ಕೆ ಯತ್ನ








