ಬೆಂಗಳೂರು: ಟೋಯಿಂಗ್ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ರದ್ದುಗೊಳಿಸಲಾಗಿದೆ. ಈಗ ನಗರದಲ್ಲಿ ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡಿದ್ರೇ ಸಂಚಾರಿ ಪೊಲೀಸರೇ ( Bengaluru Traffic Police ) ಸ್ಥಳದಲ್ಲಿ ದಂಡ ವಿಧಿಸುತ್ತಿದ್ದಾರೆ. ಇದಲ್ಲದೇ ಇನ್ಮುಂದೆ ಎಲ್ಲೆಂದರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡೋದಕ್ಕೆ ಬ್ರೇಕ್ ಹಾಕಲು ರೂಲ್ಸ್ ರೆಡಿಯಾಗಿದೆ. ಮುಂದಿನ ವಾರದಿಂದಲೇ ನಗರದಲ್ಲಿ ಪೇ ಅಂಡ್ ಪಾರ್ಕಿಂಗ್ ನೀತಿ ( Pay and Parking Rules ) ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ವಾಹನ ಸವಾರರಿಗೆ ನಿಗದಿತ ಶುಲ್ಕವನ್ನು ಕೂಡ ವಿಧಿಸಲು ನಗರ ಭೂ ಸಾರಿಗೆ ಇಲಾಖೆ ರೆಡಿಯಾಗಿದೆ.
ಎನ್ಎಚ್ಎಐ ಇನ್ವಿಐಟಿಯ ಚಿಲ್ಲರೆ ಮಾರಾಟ ಭಾಗವು ಮುಂದುವರಿಯುತ್ತದೆ: ನಿತಿನ್ ಗಡ್ಕರಿ
ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಗೆ ( Vehicle Parking ) ದೊಡ್ಡ ಸಮಸ್ಯೆ. ದಿನೇ ದಿನೇ ಬೆಳೆಯುತ್ತಿರುವಂತ ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿವೆ. ಪಾರ್ಕಿಂಗ್ ಗೆ ಜಾಗವಿಲ್ಲದೇ ರಸ್ತೆಗಳಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡೋದ್ರಿಂದಾಗಿ, ಟ್ರಾಫಿಕ್ ಸಮಸ್ಯೆ ಕೂಡ ತಲೆದೋರುತ್ತಿದೆ.
ಈ ಎಲ್ಲಾ ಸಮಸ್ಯೆಗೆ ಇತಿಶ್ರೀ ಹಾಡೋ ಸಂಬಂಧ ನಗರ ಭೂ ಸಾರಿಗೆ ಇಲಾಖೆಯಿಂದ ಬೆಂಗಳೂರಿನಲ್ಲಿ ಪಾರ್ಕಿಂಗ್ ಪಾಲಿಸಿಯನ್ನು ಜಾರಿಗೆ ತರೋದಕ್ಕೆ ಮುಂದಾಗಿದೆ. ಸಿಲಿಕಾನ್ ಸಿಟಿಯ 700 ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಸ್ಥಳ ಗುರುತಿಸಲಾಗಿದದು, ಇಲ್ಲಿ ಪೇ ಅಂಡ್ ಪಾರ್ಕಿಂಗ್ ನಿಯಮದ ಮೂಲಕ ವಾಹನ ಸವಾರರಿಂದ ಹಣ ವಸೂಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬೆಂಗಳೂರಿನ ( Bengaluru ) ಎಲ್ಲಾ ಎಂಟು ವಲಯದ 700 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕಿಂಗ್ ರೂಲ್ಸ್ ಜಾರಿಗೊಳಿಸಲಾಗುತ್ತಿದೆ. ಇಲ್ಲಿ ವಾಹನ ನಿಲುಗಡೆ ಮಾಡೋದಕ್ಕೆ ಹಣ ಪಾವತಿಸುವಂತ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎನ್ನಲಾಗಿದೆ.
ಅಂದಹಾಗೇ ಬೆಂಗಳೂರು ಪೂರ್ವ 59, ದಾಸರಹಳ್ಳಿ 104, ಯಲಹಂಕ 60, ರಾಜರಾಜೇಶ್ವರಿನಗರ 58, ಬೊಮ್ಮನಹಳ್ಳಿ 58, ಬೆಂಗಳೂರು ದಕ್ಷಿಣ 197 ಸೇರಿದಂತೆ 700 ರಸ್ತೆಗಳಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ.
ಇನ್ಸಪೆಕ್ಟರ್ ನಂದೀಶ್ ಸಾವು ಪ್ರಕರಣ: ಬಿಜೆಪಿ ಸರಕಾರದಲ್ಲಿ ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ – HDK ಕಿಡಿ
ಈ ಪೇ ಅಂಡ್ ಪಾರ್ಕಿಂಗ್ ಸ್ಥಳಗಳಲ್ಲಿ ಎ, ಬಿ, ಸಿ ವರ್ಗವೆಂದು ವರ್ಗೀಕರಿಸಲಾಗಿದ್ದು ಎ ವರ್ಗದಲ್ಲಿ ಬೈಕ್ ನಿಲ್ಲಿಸಿದ್ರೇ 15 ರೂ, ಬಿ ವರ್ಗದಲ್ಲಿ 10 ರೂ, ಸಿ ವರ್ಗದಲ್ಲಿ 5 ರೂ ಹಣವನ್ನು ಪ್ರತಿ ಗಂಟೆಗೆ ನೀಡಬೇಕಾಗಿದೆ. ಇನ್ನೂ ಕಾರಿಗೆ ಎ ವರ್ಗದಲ್ಲಿ ರೂ 30, ಬಿ ವರ್ಗದಲ್ಲಿ 20 ರೂ ಹಾಗೂ ಸಿ ವರ್ಗದ ಸ್ಥಳದಲ್ಲಿ 15 ರೂ ಹಣವನ್ನು ಪ್ರತಿಗಂಟೆಗೆ ಪಾವತಿಸಿ, ಪಾರ್ಕ್ ಮಾಡಬಹುದಾಗಿದೆ.